ನವದೆಹಲಿ : ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್, ಸೆಂಚುರಿ ಬಾರಿಸಿದಾಗ ಆಕಾಶದತ್ತ ಮುಖ ಮಾಡಿ ನೋಡುತ್ತಿದ್ದದ್ದೇಕೆ? ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ.
ಬಿಸಿಸಿಐ ಆಯೋಜನೆ ಮಾಡಿದ್ದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಚಿನ್ ತೆಂಡೂಲ್ಕರ್, 1999 ರ ವಿಶ್ವಕಪ್ ಸಂದರ್ಭದಲ್ಲಿ ನಮ್ಮ ತಂದೆ ಸಾವನ್ನಪ್ಪಿದರು. ಆಗ ನಾನು ಎರಡು ದಿನಗಳ ಕಾಲ ರಜೆ ಮೇರೆಗೆ ಕ್ರಿಕೆಟ್ ಬಿಟ್ಟು ಮನೆಗೆ ತೆರಳಿ ವಾಪಸ್ ಆದೆ. ಬಳಿಕ ವಿಶ್ವಕಪ್ ಆಡುವ ಸಂದರ್ಭದಲ್ಲಿ ಸೆಂಚುರಿ ಬಾರಿಸಿದಾಗ ಅದನ್ನು ನಾನು ತಂದೆಗೆ ತೋರಿಸಲು ಆಕಾಶದತ್ತ ಮುಖ ಮಾಡುತ್ತಿದ್ದೆ.
ಅಂದಿನಿಂದ ಆ ಅಭ್ಯಾಸ ಶುರುವಾಯಿತು. ಪ್ರತಿ ಬಾರಿಯೂ ನಾನು ಸೆಂಚುರಿ ಬಾರಿಸಿದಾಗ ಅದನ್ನು ತಂದೆಗೆ ತೋರಿಸಲು ಆಕಾಶದತ್ತ ಮುಖ ಮಾಡುವುದು ಸಹಜವಾಗಿ ಹೋಯಿತು ಎಂದು ಸಚಿನ್ ತೆಂಡೂಲ್ಕರ್ ತಿಳಿಸಿದ್ದಾರೆ.