ಮುಂಬಯಿ: ದೇಶದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ ಅವರ ವೃತ್ತಿಪರ, ಉದ್ಯಮ ಕ್ಷೇತ್ರದಲ್ಲಿ ದೊಡ್ಡ ಸಾಧಕರಾದರೂ ಪ್ರೇಮ ವೈಫಲ್ಯ ಅನುಭವಿಸಿದ್ದಾರೆ. ಹಲವು ಬಾರಿ ಪ್ರೀತಿ-ಪ್ರೇಮದ ಬಲೆಗೆ ಸಿಲುಕಿದ್ದ ಪ್ರೇಮ ವೈಫಲ್ಯದಿಂದಾಗಿ ಅವಿವಾಹಿತರಾಗಿ ಉಳಿದಿದ್ದಾರೆ.
ರತನ್ ಟಾಟಾ ಮದುವೆಯಾಗಿಲ್ಲ. ಆದರೆ ನಾಲ್ಕು ಬಾರಿ ಪ್ರೀತಿ ವಿಫಲವಾಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಪ್ರೀತಿ ತನ್ನ ಜೀವನದಲ್ಲಿ ಒಂದಲ್ಲ ನಾಲ್ಕು ಬಾರಿ ಬಾಗಿಲು ತಟ್ಟಿದೆ. ಕಷ್ಟಕರ ಸಂದರ್ಭಗಳು ಹಾಗೂ ಅನಿವಾರ್ಯ ಸನ್ನಿವೇಶಗಳಿಂದಾಗಿ ಪ್ರೀತಿ-ಪ್ರೇಮ ಮದುವೆ ಹಂತ ತಲುಪಲಿಲ್ಲ ಎಂದಿದ್ದಾರೆ. ಆನಂತರ ನಾನು ಮದುವೆಯ ಕುರಿತು ಚಿಂತಿಸಲೇ ಇಲ್ಲ. ಟಾಟಾ ಗ್ರೂಪ್‌ನ ವ್ಯಾಪಾರ ಸಾಮ್ರಾಜ್ಯವನ್ನು ವಿಸ್ತರಿಸುವುದರ ಮೇಲೆ ಇಡೀ ಜೀವನವು ಸಂಪೂರ್ಣವಾಗಿ ಕೇಂದ್ರೀಕೃತವಾಗಿತ್ತು ಎಂದು ಕೂಡ ಅವರು ಸಂದರ್ಶನದಲ್ಲಿ ಹೇಳಿದ್ದಾರೆ.
ಅಮೆರಿಕದಲ್ಲಿದ್ದ ವೇಳೆ ಟಾಟಾಗೆ ಅಲ್ಲಿನ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ನನ್ನ ಜೀವನದಲ್ಲಿ ಆ 2 ವರ್ಷಗಳು ತುಂಬ ಕಲರ್ ಫುಲ್ ಆಗಿದ್ದವು. ಆದರೆ, ಭಾರತಕ್ಕೆ ಬರಬೇಕಾಗಿ ಬಂದಾಗ ಆಕೆಗೆ ಭಾರತಕ್ಕೆ ಬರಲು ಇಷ್ಟವಿರಲಿಲ್ಲ. ಅದೇ ಸಮಯದಲ್ಲಿ ಭಾರತ-ಚೀನಾ ಯುದ್ಧವೂ ಆರಂಭವಾಯಿತು. ಹೀಗಾಗಿ ಅಮೆರಿಕದಲ್ಲಿ ಬೇರೊಬ್ಬನನ್ನು ಮದುವೆಯಾದಳು. ಇದಾದ ನಂತರ ರತನ್ ಟಾಟಾ ತಮ್ಮ ಸಂಪೂರ್ಣ ಗಮನವನ್ನು ಟಾಟಾ ಗ್ರೂಪ್ ಮೇಲೆ ಕೇಂದ್ರೀಕರಿಸಿದ್ದರು.
ನನಗೆ ‘ಕ್ರಶ್’ ಬಗ್ಗೆ ಸಂಕೋಚವಿದ್ದರೆ, ನಾಲ್ಕು ಬಾರಿ ನಾನು ಮದುವೆಗೆ ಗಂಭೀರವಾಗಿ ಚಿಂತಿಸಿದ್ದೆ. ಆನಂತರ ಯಾವುದೋ ಭಯದಿಂದ ಹಿಂದೆ ಸರಿದಿದ್ದೆ. ನಾನು ಅಮೆರಿಕದಲ್ಲಿ ಕೆಲಸ ಮಾಡುತ್ತಿದ್ದಾಗ, ನನ್ನ ಪ್ರೀತಿಯ ಬಗ್ಗೆ ತುಂಬಾ ಗಂಭೀರವಾಗಿದ್ದೆ. ಭಾರತಕ್ಕೆ ಮರಳಿದ ನಂತರ ನಾವು ಮದುವೆಯಾಗಲು ಸಾಧ್ಯವಾಗಲಿಲ್ಲ ಎಂದು ಸಂದರ್ಶನದಲ್ಲಿ ರತನ್ ಹೇಳಿದ್ದಾರೆ.
ರತನ್ ಟಾಟಾ 1937 ರ ಡಿಸೆಂಬರ್ 28 ರಂದು ಜನಿಸಿದರು. ಟಾಟಾ ಗ್ರೂಪ್ ಆಫ್ ಬಿಸಿನೆಸ್ ಅನ್ನು ಯಶಸ್ವಿಯಾಗಿ ಮುನ್ನಡೆಸಿದರು. ಹಾಗಾಗಿಯೇ ಟಾಟಾ ಇಂದು ಜಗತ್ತಿನಾದ್ಯಂತ ಪ್ರಸಿದ್ಧಿಯಾಗಿದ್ದಾರೆ. ಉಪ್ಪಿನಿಂದ ಹಿಡಿದು ಆಕಾಶದಲ್ಲಿ ವಿಮಾನ ಪ್ರಯಾಣದವರೆಗೆ ಟಾಟಾ ಗ್ರೂಪ್ ಕಂಪನಿಗಳು ತಮ್ಮ ಅಸ್ತಿತ್ವ ಉಳಿಸಿಕೊಂಡಿವೆ. ಮದುವೆಯಾಗದಿದ್ದರೂ ರತನ್ ಟಾಟಾ ತುಂಬಾ ಸಂತೋಷದ ಜೀವನ ನಡೆಸುತ್ತಿದ್ದರು. ಕಾರುಗಳಿಂದ ಹಿಡಿದು ಪಿಯಾನೋ ನುಡಿಸುವವರೆಗೆ ಎಲ್ಲದರಲ್ಲೂ ಅವರಿಗೆ ಆಸಕ್ತಿಯಿತ್ತು.