ಬಾಲಿವುಡ್ ನಟ ಅಮೀರ್ ಖಾನ್ ಗೆ ವೃತ್ತಿ ರಂಗದಲ್ಲಿ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಎಲ್ಲರೂ ಕರೆಯುತ್ತಾರೆ. ಆದರೆ, ಅವರ ವೈಯಕ್ತಿಕ ಜೀವನ ಮಾತ್ರ ಹಾಗಿಲ್ಲ ಎನ್ನುವುದು ಬಹುತೇಕರಿಗೆ ಗೊತ್ತಿದೆ. ಈ ಮಧ್ಯೆ ಅವರ ವೈಯಕ್ತಿಕವಾದ ಮತ್ತೊಂದು ವಿಚಾರ ಬಯಲಾಗಿದೆ.
ಅಮಿರ್ ಖಾನ್ ಈಗಾಗಲೇ ಎರಡು ಬಾರಿ ವಿಚ್ಛೇದನ ನೀಡಿದ್ದಾರೆ. ಸಾಂಸಾರಿಕ ಜಂಜಾಟಕ್ಕೆ ಸಿಲುಕಿದ್ದ ಅಮೀರ್ ಖಾನ್ ಹಿಂದೊಮ್ಮೆ ಖಿನ್ನತೆಗೂ ಜಾರಿದ್ದರು. ಅಷ್ಟೇ ಅಲ್ಲ, ಅವರು ದೊಡ್ಡ ಕುಡುಕ ಕೂಡ ಆಗಿದ್ದರು ಎಂಬ ವಿಷಯ ಈಗ ವೈರಲ್ ಆಗಿದೆ.
ಈ ಕುರಿತು ಅವರೇ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. “ನಾನು ಮತ್ತು ರೀನಾ ದತ್ತ ಬೇರೆಯಾದಾಗ, ಸುಮಾರು 2-3 ವರ್ಷಗಳ ಕಾಲ ನಾನು ಅದೇ ದುಃಖದಲ್ಲಿದ್ದೆ. ಆ ವೇಳೆ ನಾನು ಕೆಲಸ ಮಾಡುತ್ತಿರಲಿಲ್ಲ. ಸಿನಿಮಾ ಸ್ಕ್ರಿಪ್ಟ್‌ಗಳನ್ನು ಕೂಡ ಕೇಳುತ್ತಿರಲಿಲ್ಲ. ಮನೆಯಲ್ಲಿ ಒಬ್ಬಂಟಿಯಾಗಿ ಇರುತ್ತಿದ್ದೆ. ಆ ವೇಳೆ ಬರೋಬ್ಬರಿ ಒಂದೂವರೆ ವರ್ಷಗಳ ಕಾಲ ಕುಡಿತಕ್ಕೆ ನಾನು ದಾಸನಾಗಿಬಿಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.
“ಇದು ಅಚ್ಚರಿ ಎನಿಸಬಹುದು, ಆದರೂ ಸತ್ಯ; ನಾನು ದೊಡ್ಡ ಕುಡುಕ ಆಗಿ ಬಿಟ್ಟಿದ್ದೆ. ರಾತ್ರಿ ನನಗೆ ನಿದ್ದೆಯೇ ಬರುತ್ತಿರಲಿಲ್ಲ. ಹೀಗಾಗಿ ಸಿಕ್ಕಾಪಟ್ಟೆ ಕುಡಿಯೋದಕ್ಕೆ ಆರಂಭಿಸಿದೆ. ಮದ್ಯವನ್ನೇ ಸೇವಿಸಿದ ವ್ಯಕ್ತಿಯಾಗಿದ್ದ ನಾನು, ಒಂದು ದಿನದಲ್ಲಿ ಯಾರೂ ಕುಡಿಯಲು ಸಾಧ್ಯವಾಗದಷ್ಟು ಮದ್ಯ ಕುಡಿದು ಖಾಲಿ ಮಾಡುತ್ತಿದ್ದೆ ಎಂದು ಹೇಳಿದ್ದಾರೆ.
“ಆಗ ದೇವದಾಸ್ ರೀತಿ ಆಗಿದ್ದೆ. ತನ್ನನ್ನು ತಾನು ನಾಶ ಮಾಡಿಕೊಳ್ಳಲು ಪ್ರಯತ್ನಿಸುತ್ತಿರುವ ವ್ಯಕ್ತಿಯಂತಾಗಿದ್ದೆ. ಇದನ್ನೇ ಒಂದೂವರೆ ವರ್ಷಗಳ ಕಾಲ ಮಾಡುತ್ತಿದ್ದೆ. 2001ರಲ್ಲಿ ‘ದಿಲ್ ಚಾಹ್ತ ಹೈ’ ಸಿನಿಮಾ ತೆರೆಕಂಡಿತ್ತು. ಆನಂತರ ಆಮಿರ್ ಖಾನ್ 3 ವರ್ಷ ಸಿನಿಮಾಗಳನ್ನು ಮಾಡಿಯೇ ಇರಲಿಲ್ಲ. ಆನಂತರ 2005ರಲ್ಲಿ ‘ಮಂಗಲ್ ಪಾಂಡೆ’ ಸಿನಿಮಾ ಮೂಲಕ ಮತ್ತೆ ಫೀಲ್ಡ್ ಗೆ ಬಂದರು.
ಬಾಲಿವುಡ್ ನಟ ಅಮೀರ್ ಖಾನ್ 1986ರಲ್ಲಿ ರೀನಾ ದತ್ತ ಜೊತೆಗೆ ಮದುವೆ ಆಗಿದ್ದರು. ಅವರಿಗೆ ಜುನೈದ್ ಖಾನ್ ಮತ್ತು ಇರಾ ಖಾನ್ ಎಂಬಿಬ್ಬರು ಮಕ್ಕಳಿದ್ದಾರೆ. ಆದರೆ, 2002ರಲ್ಲಿ ಇಬ್ಬರೂ ವಿಚ್ಛೇದನ ಪಡೆದುಕೊಂಡಿದ್ದರು. ಆ ಸಂದರ್ಭದಲ್ಲೇ ಖಿನ್ನತೆಗೆ ಜಾರಿದ್ದೆ ಎಂದು ಅಮಿರ್ ಹೇಳಿದ್ದಾರೆ. ಈಗ ಗೌರಿ ಸ್ಪ್ರಾಟ್ ಜೊತೆ ಡೇಟಿಂಗ್ ನಲ್ಲಿದ್ದರೂ ತಮ್ಮಿಬ್ಬರು ಮಾಜಿ ಪತ್ನಿಯರ ಜೊತೆ ಈಗಲೂ ಉತ್ತಮ ಒಡನಾಟ ಮಾತ್ರ ಹೊಂದಿದ್ದಾರೆ.