ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡದ ಮಧ್ಯೆ ಟಿ20 ಸರಣಿ ನಡೆಯುತ್ತಿದ್ದು, ಈಗಾಗಲೇ ಎರಡು ಪಂದ್ಯಗಳು ಮುಗಿದಿವೆ. ಆದರೆ, ಎರಡೂ ಪಂದ್ಯಗಳು ಸೇರಿದಂತೆ ಅನುಭವಿ ಆಲ್ ರೌಂಡರ್ ಅಕ್ಷರ್ ಪಟೇಲ್ ಕೇವಲ 2 ಓವರ್ ಎಸೆದಿದ್ದು, ನಾಯಕ ಸೂರ್ಯಕುಮಾರ್ ನಡೆ ಚರ್ಚೆಗೆ ಕಾರಣವಾಗುತ್ತಿದೆ.
ಈ ಎರಡೂ ಪಂದ್ಯಗಳಲ್ಲೂ ಅಕ್ಷರ್ ಪಟೇಲ್ ಆಡಿದ್ದಾರೆ. ಆದರೆ, ಕೇವಲ 2 ಓವರ್ ಗಳನ್ನು ಮಾತ್ರ ಎಸೆದಿದ್ದಾರೆ. ಭಾರತೀಯ ಆಲ್ ರೌಂಡರ್ ಅಕ್ಷರ್ ಪಟೇಲ್ ಉತ್ತಮ ಬೌಲರ್ ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಸೂರ್ಯಕುಮಾರ್ ಯಾದವ್ ಅಕ್ಷರ್ ಅವರನ್ನು ಎರಡೂ ಪಂದ್ಯಗಳಲ್ಲಿ ಬಳಸಿಕೊಳ್ಳದಿರುವುದು ಅನುಮಾನಕ್ಕೆ ದಾರಿ ಮಾಡಿ ಕೊಟ್ಟಿದೆ.
ಮೊದಲ ಟಿ20 ಪಂದ್ಯದಲ್ಲಿ ಅಕ್ಷರ್ ಪಟೇಲ್ ಕಡೆಯಿಂದ ಸೂರ್ಯಕುಮಾರ್ ಯಾದವ್ ಹಾಕಿಸಿದ್ದು ಕೇವಲ ಒಂದು ಓವರ್ ಮಾತ್ರ. ಅದೂ 6ನೇ ಬೌಲರ್ ಆಗಿ ಬಳಸಿಕೊಂಡಿದ್ದರು. ಅಂದರೆ ರವಿ ಬಿಷ್ಣೋಯ್, ವರುಣ್ ಚಕ್ರವರ್ತಿ ಅವರಿಂದ 8 ಓವರ್ ಹಾಕಿಸಿದ್ದರು. ಅನುಭವಿ ಆಟಗಾರನಿಗೆ ಮಾತ್ರ ಒಂದೇ ಓವರ್ ನೀಡಿದ್ದರು.
ದ್ವಿತೀಯ ಟಿ20 ಪಂದ್ಯದಲ್ಲೂ ಅದೇ ರೀತಿ ಆಗಿದೆ. ವರುಣ್ ಚಕ್ರವರ್ತಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಬಳಿಸುತ್ತಿದ್ದರೂ, ಅನುಭವಿ ಸ್ಪಿನ್ನರ್ ಅಕ್ಷರ್ ಪಟೇಲ್ ಅವರನ್ನು ಬಳಸಿಕೊಳ್ಳಲು ಸೂರ್ಯಕುಮಾರ್ ಯಾದವ್ ಮುಂದಾಗಲೇ ಇಲ್ಲ. ಈ ಪಂದ್ಯದಲ್ಲೂ 6ನೇ ಬೌಲರ್ ಆಗಿ ಬಳಸಿಕೊಂಡು ಕೇವಲ ಒಂದು ಓವರ್ ಮಾತ್ರ ನೀಡಿದ್ದರು. ಹೀಗಾಗಿ ಭಾರತ ತಂಡ ಸೋಲಬೇಕಾಯಿತು. ಆದರೆ, ಸೂರ್ಯ ಕುಮಾರ್ ಅವರ ನಡೆ ಮಾತ್ರ ಈಗ ಚರ್ಚೆಗೆ ಕಾರಣವಾಗಿದೆ. ಅಲ್ಲದೇ, ಅನುಮಾನಕ್ಕೂ ಕಾರಣವಾಗಿದೆ.