ಬೆಂಗಳೂರು: ನಿವೇದಿತಾ ಗೌಡ (Niveditha Gowda) ಮತ್ತು ಚಂದನ್ ಶೆಟ್ಟಿ ಬಗ್ಗೆ ಇತ್ತೀಚೆಗೆ ಗಾಸಿಪ್ ಹರಿದಾಡುತ್ತಿದ್ದು, ಈ ಬಗ್ಗೆ ನಟ ಚಂದನ್ ಶೆಟ್ಟಿ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದೇನು ಮಕ್ಕಳ ಆಟವಲ್ಲ. ನಾವಿಬ್ಬರು ಮತ್ತೆ ಒಂದಾಗುವುದಿಲ್ಲ. ನಾವಿಬ್ಬರೂ ಯಾವ ಕಾರಣಕ್ಕೆ ಬೇರೆ ಬೇರೆಯಾಗಿದ್ದೇವೆ ಎಂಬುವುದು ನಮ್ಮ ವೈಯಕ್ತಿಕ ವಿಚಾರ. ಆ ನಿರ್ಧಾರದ ಬಗ್ಗೆ ನಾವಿಬ್ಬರೂ ಸ್ಪಷ್ಟವಾಗಿದ್ದೇವೆ ಎಂದಿದ್ದಾರೆ.
ನಮ್ಮಿಬ್ಬರಲ್ಲಿ ಈ ಕುರಿತು ಯಾವುದೇ ಪಶ್ಚಾತ್ತಾಪ ಇಲ್ಲ. ನಿವೇದಿತಾ ಜೊತೆ ಒಂದಾಗಲ್ಲ. ನಮ್ಮ ನಿರ್ಧಾರ ಸರಿಯಿದೆ ಎಂದಿದ್ದಾರೆ.