ಚಿಕ್ಕಬಳ್ಳಾಪುರ : ಟಿಪ್ಪರ್‌ಗಳನ್ನು ತಹಶೀಲ್ದಾರ್ ಸೀಜ್ ಮಾಡಿದ್ರು, ಯಾವನ್ಯಾವನಿಗೆ ಎಷ್ಟೆಷ್ಟು ಹಣ ಹೋಗ್ತಾ ಇದಿಯೋ ತಿಂಗಳಿಗೆ ಯಾವನಿಗೆ ಗೊತ್ತು ಎಂದು ಶಾಸಕ ಪ್ರದೀಪ್ ಈಶ್ವರ್ ಕಿಡಿಕಾರಿದ್ದಾರೆ.
ಚಿಕ್ಕಬಳ್ಳಾಪುರದಲ್ಲಿ ವರದಿಗಾರರೊಂದಿಗೆ ಶಾಸಕ ಪ್ರದೀಪ್ ಈಶ್ವರ್ ಮಾತನಾಡಿ ಟಿಪ್ಪರ್‌ಗಳನ್ನು ತಹಶೀಲ್ದಾರ್ ಸೀಜ್ ಮಾಡಿದ್ರು, ಸೀಜ್ ಮಾಡಿದಕ್ಕೆ ಹೈಯರ್ ಅಫೀಸರ್ಸ್ ಬೈಯ್ತಾರೆ ಯಾವನ್ಯಾವನಿಗೆ ಎಷ್ಟೇಷ್ಟು ಹಣ ಹೋಗ್ತಾ ಇದ್ದೀಯೋ ತಿಂಗಳಿಗೆ ಯಾವನಿಗೆ ಗೊತ್ತು. ಅಯೋಗ್ಯರಿಗೆ ಅವರ ಮನೆಯಲ್ಲಿ ಆದ್ರೆ ಗೊತ್ತಾಗುತ್ತೆ. ಉನ್ನತ ಅಧಿಕಾರಿಗಳು, ಜಿಲ್ಲೆ ಆಡಳಿತ ಮಂಡಳಿ ಕಾಮನ್ ಸೆನ್ಸ್ ಇಂದ ನಡೆದುಕೊಳ್ಳಬೇಕು ತಹಶೀಲ್ದಾರ್ ಸಬ್ ಇನ್ಸ್‌ಪೆಕ್ಟರ್ ಏನು ಮಾಡಕ್ಕೆ ಆಗುತ್ತೆ .ಟಿಪ್ಪರ್ ಚಾಲಕನನ್ನು ರಾತ್ರಿಯೇ ಅರೆಸ್ಟ್ ಮಾಡಿಸಿದ್ದೀನಿ. ಅವರ ಕುಟುಂಬಕ್ಕೆ ಸಹಾಯ ಮಾಡುತ್ತೇನೆ ಎಂದಿದ್ದಾರೆ.
ಚಿಕ್ಕಬಳ್ಳಾಪುರ ಅಪಘಾತದ ಬಗ್ಗೆ ಸಿಎಂ ಗಮನಕ್ಕೆ ತಂದಿದ್ದೇನೆ ಎಂಬ ಹೇಳಿಕೆಯ ವಿಚಾರಕ್ಕೆ ಸಂಬಂಧಪಟ್ಟಂತೆ ಸಿಎಂ ನಿಧಿಯಿಂದ ಪರಿಹಾರ ಧನ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಅವರ ಕುಟುಂಬಕ್ಕೆ ಏನು ಸಹಾಯ ಬೇಕೋ ಅದು ಮಾಡುತ್ತೇನೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸಚಿವ ಸೋಮಣ್ಣ ಎದುರೇ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ರೊಚ್ಚಿಗೆದ್ದ ನಗರಸಭೆ ಅಧ್ಯಕ್ಷ!



















