ಮುಂಬಯಿ: ಬಾಲಿವುಡ್ ನ ಮಹಾನ್ ನಾಯಕ ಅಮಿತಾಭ್ ಬಚ್ಚನ್. ಇಂದಿಗೂ ತಮ್ಮ ಚಾರ್ಮ್ ಉಳಿಸಿಕೊಂಡಿರುವ ನಾಯಕ. ಅವರು ಸಿನಿಮಾಗಳಿಂದ ದೂರವಾದ ನಂತರ ಅಮಿತಾಭ್ ‘ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಜನರನ್ನು ರಂಜಿಸುತ್ತಿದ್ದರು. ಆದರೆ, ಈಗ ಈ ಕಾರ್ಯಕ್ರಮದಿಂದ ದೂರ ಸರಿಯುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಮಾವನ ಸೀಟ್ ನಲ್ಲಿ ಅವರ ಸೊಸೆ ಐಶ್ವರ್ಯಾ ರೈ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ಈ ಮಧ್ಯೆ ಮಾವ- ಸೊಸೆ-ಮಗನ ಸೇರಿದಂತೆ ಮೂವರಲ್ಲಿ ಯಾರು ಶ್ರೀಮಂತರು? ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದಾರೆ.
ಅಮಿತಾಭ್ ಬಚ್ಚನ್ ಸಿನಿಮಾಗಳು ಮತ್ತು ಜಾಹೀರಾತುಗಳಿಂದ ದುಡ್ಡು ಈಗಲೂ ದುಡ್ಡು ಮಾಡುತ್ತಿದ್ದಾರೆ. ಅಮಿತಾಭ್ ಒಂದು ಸಿನಿಮಾಗೆ 6 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಅಲ್ಲದೇ, ರಿಯಲ್ ಎಸ್ಟೇಟ್ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಬಂಡವಾಳ ಹೂಡಿ ಲಾಭ ಪಡೆಯುತ್ತಿದ್ದಾರೆ. ಅಮಿತಾಭ್ ಸಾಕಷ್ಟು ಐಷಾರಾಮಿ ಕಾರುಗಳನ್ನು ಸಂಗ್ರಹಿಸಿದ್ದಾರೆ. 2 ಮರ್ಸಿಡಿಸ್, 1 ರೇಂಜ್ ರೋವರ್ ಮತ್ತು 16 ಲಕ್ಸುರಿ ಕಾರು ಹೊಂದಿರುವ ಅವರು, 120 ಕೋಟಿ ರೂ. ಬ್ಯಾಂಕ್ ಬ್ಯಾಲೆನ್ಸ್ ಹೊಂದಿದ್ದಾರೆ. ಅವರ ನಿವ್ವಳ ಆಸ್ತಿ ಮೌಲ್ಯ 3,190 ಕೋಟಿ ರೂಪಾಯಿ. ಇದೆ.
ಐಶ್ವರ್ಯಾ ರೈ ಕೂಡ ಇನ್ನೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಸಿನಿಮಾಗಳು ಮತ್ತು ಜಾಹೀರಾತುಗಳ ಜೊತೆಗೆ ಪ್ರಾಪರ್ಟಿ ಮತ್ತು ಸ್ಟಾರ್ಟ್ ಅಪ್‌ಗಳಿಂದ ಕೋಟಿಗಟ್ಟಲೆ ದುಡ್ಡು ಗಳಿಸುತ್ತಿದ್ದಾರೆ. ಸಾಕಷ್ಟು ಹಣವನ್ನು ಹಲವಾರು ಕ್ಷೇತ್ರಗಳಲ್ಲಿ ಇನ್ವೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಎಂಬೆ, ಹೆಲ್ತ್ ಕೇರ್ ಸ್ಟಾರ್ಟಪ್ ಪಾಸಿಬಲ್ ಮತ್ತು ವಿಂಡ್ ಪವರ್ ಪ್ರಾಜೆಕ್ಟ್ ನಲ್ಲಿ ಬಂಡವಾಳ ಹಾಕಿದ್ದಾರೆ. ಹಲವು ನಗರಗಳಲ್ಲಿ ಸಾಕಷ್ಟು ಆಸ್ತಿ ಹೊಂದಿದ್ದಾರೆ. ಹೀಗಾಗಿ ಐಶ್ವರ್ಯಾ ರೈ ಅವರು ಈಗ 776 ಕೋಟಿ ರೂ. ಆಸ್ತಿಯ ಮಾಲೀಕರಿದ್ದಾರೆ. ಆದರೆ, ಅವರ ಪತಿ ಅಭಿಷೇಕ್ ಬಚ್ಚನ್ ಮಾತ್ರ ಐಶ್ವರ್ಯಾ ರೈಗಿಂತ ಬಡವರು. ಅಭಿಷೇಕ್ ಗಿಂತ ಐಶ್ವರ್ಯಾ ರೈ ಸುಮಾರು 4 ಪಟ್ಟು ಹೆಚ್ಚು ಶ್ರೀಮಂತರು ಎನ್ನಲಾಗಿದೆ. ಇದನ್ನು ನೋಡಿದರೆ ಬಚ್ಚನ್ ಮನೆಯಲ್ಲಿ ಬಚನ್ ಬಾಸ್ ಆಗಿಯೇ ಇದ್ದಾರೆ. ನಂತರದ ಸ್ಥಾನದಲ್ಲಿ ಸೊಸೆ ಇದ್ದಾರೆ. ಆನಂತರದ ಸ್ಥಾನ ಮಗನದ್ದಾಗಿದೆ.