ಬೆಂಗಳೂರು: ಬಿಗ್ ಬಾಸ್ ಸೀಸನ್ ಕನ್ನಡ 12 ಆವೃತ್ತಿಯು ಅಂತಿಮ ಹಂತದಲ್ಲಿದೆ. ಇದೇ ಭಾನುವಾರ ಫೈನಲ್ ನಡೆಯಲಿದ್ದು, ಆರು ಮಂದಿ ಫೈನಲ್ ಪ್ರವೇಶ ಮಾಡಿದ್ದಾರೆ. ಗಿಲ್ಲಿ, ಅಶ್ವಿನಿಗೌಡ, ರಘು, ಕಾವ್ಯಾ, ಧನುಷ್, ರಕ್ಷಿತಾ ಮನೆಯಲ್ಲಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆಯ ಮಹಿಳಾ ಘಟಕದ ಅಧ್ಯಕ್ಷೆ ಅಶ್ವಿನಿಗೌಡ ಫೈನಲ್ ತಲುಪಿರೋದು ಸಾಮಾಜಿಕ ಜಾಲತಾಣದಲ್ಲಿ ಬಹಳಷ್ಟು ಚರ್ಚೆಯಾಗುತ್ತಿದೆ. ಗಿಲ್ಲಿ ಅಭಿಮಾನಿಗಳು ಒಂದು ಕಡೇ ಭರ್ಜರಿ ಪ್ರಚಾರ ಮಾಡುತ್ತಿದ್ದರೆ, ಅಶ್ವಿನಿ ಪರ ಕರವೇ ಹೋರಾಟಗಾರರು ಭರ್ಜರಿ ಪ್ರಚಾರ ಮಾಡುತ್ತಿದ್ದಾರೆ.
ಇದೆದಲ್ಲರ ನಡುವೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡರವರು ಇತ್ತಿಚೆಗೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿದ್ದು ಸಾಕಷ್ಟು ಆಯಾಮಗಳನ್ನ ಪಡೆದುಕೊಂಡಿದೆ. ಅಶ್ವಿನಿಗೌಡ ಪರ ಬ್ಯಾಟ್ ಬೀಸುತ್ತಿದ್ದಾರೆ ಎನ್ನುವ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದೆ.
ಈ ಮಧ್ಯೆ ಕರವೇ ಶಿವರಾಮೇಗೌಡ ಬಿಗ್‌ಬಾಸ್ ಶೋ ವಿರುದ್ದ ತಿರುಗಿಬಿದ್ದಿದ್ದಾರೆ. ನಾಡು-ನುಡಿ, ಜಲ-ಭಾಷೆ, ರಾಜ್ಯ- ದೇಶದ ವಿಚಾರ ಬಂದಾಗ ಯಾರು ಮಾತನಾಡುವುದಿಲ್ಲ, ಈಗ ಬಿಗ್‌ಬಾಸ್‌ನಲ್ಲಿ ಓರ್ವ ಸ್ಪರ್ಧಿಯನ್ನು ಗೆಲ್ಲಿಸುವಂತೆ ಅಭಿಯಾನಗಳನ್ನು ಮಾಡುತ್ತಾ ಇದ್ದೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಗ್‌ಬಾಸ್‌ನಿಂದ ಜನರಿಗೆ ಏನೂ ಸಂದೇಶ ಸಿಗ್ತಾ ಇದೆ. ಸೂಕ್ತ ಸ್ಪರ್ಧಿಯನ್ನ ಜನರೇ ಮತ ಹಾಕಿ ಗೆಲ್ಲಿಸುತ್ತಾರೆ ಅದಕ್ಕಾಗಿ ಈ ರೀತಿಯಲ್ಲ ಮಾಡುವುದು ಸರಿಯಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ‘ಲಂಬೋದರ 2.0’ AI ಕ್ವಾಟ್ಲೆ ಶುರು..!



















