ಐಪಿಎಲ್ ನಲ್ಲಿ ಪ್ಲೇ ಆಫ್ ಹಂತದಲ್ಲೇ ಮನೆಗೆ ಹೋಗಿರುವ ಚೆನ್ನೈ ಸೂಪರ್ ಕಿಂಗ್ಸ್ ಗೆ ಧೋನಿ ಸಾರಥ್ಯವೂ ಅದೃಷ್ಟ ತರಲಿಲ್ಲ.
ಸದ್ಯ ಐಪಿಎಲ್ ಸೀಜನ್ ನಿಂದ ಧೋನಿ ತಂಡ ಹೊರಬಿದ್ದಿದೆ. ಆದರೆ, ಇದೀಗ ನಾವು ಹೇಳಲು ಹೊರಟಿರುವುದು ಆ ಸುದ್ದಿಯಲ್ಲ. ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್, ವಿಶ್ವಕಪ್ ವಿಜೇತ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಪುತ್ರಿ ಯಾವ ಶಾಲೆಯಲ್ಲಿ ಓದುತ್ತಿದ್ದಾಳೆ ಎನ್ನುವುದು. ಇತ್ತೀಚೆಗಷ್ಟೇ ರೋಹಿತ್ ಪುತ್ರಿ ಹೋಗುತ್ತಿರುವ ಶಾಲೆ ಹಾಗೂ ಫೀಸ್ ಬಗ್ಗೆ ದೊಡ್ಡ ಸುದ್ದಿಯಾಗಿತ್ತು. ಈಗ ಧೋನಿ ಪುತ್ರಿಯದ್ದೂ ಅದೇ ರೀತಿ ಸದ್ದು ಮಾಡುತ್ತಿದೆ.

ಧೋನಿ ಮಗಳು ಜೀವಾ ಅಪ್ಪನ ತವರು ರಾಂಚಿಯ ಶಾಲೆಯಲ್ಲೇ ಅಡ್ಮೀಷನ್ ಮಾಡಿಸಿದ್ದಾಳೆ. ಹಾಗಂತಾ ಅದು ಅಂತಿಂಥಾ ಶಾಲೆ ಅಲ್ಲವೇ ಅಲ್ಲ. ಯಾಕೆಂದ್ರೆ ಇದು ರಾಂಚಿಯ ಅತ್ಯಂತ ಪ್ರತಿಷ್ಠಿತ ಶಾಲೆಗಳಲ್ಲೊಂದು. ಜೀವಾ ಓದುತ್ತಿರುವುದು ರಾಂಚಿಯ ಟೌರಿಯನ್ ಶಾಲೆಯಲ್ಲಿ. 2008ರಲ್ಲಿ ಅಮಿತ್ ಬಜ್ವಾ ಸ್ಥಾಪಿಸಿದ ಶಾಲೆಯಲ್ಲಿ ಧೋನಿ ಮಗಳು ಅಭ್ಯಾಸ ಮಾಡುತ್ತಿದ್ದಾಳೆ.
ಈ ಶಾಲೆಯಲ್ಲಿ ಕೆಜಿಯಿಂದ 8ನೇ ತರಗತಿವರೆಗೂ ಫೀಸ್ ಬರೋಬ್ಬರಿ 4.40 ಲಕ್ಷ ರೂ. ಇದ್ದರೆ, 9ರಿಂದ 12ನೇ ತರಗತಿವರೆಗೂ 4.80 ಲಕ್ಷ ರೂ.ಗಳಷ್ಟಿದೆ. 65 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಶಾಲೆ ಸುಂದರ ಹಸಿರು ವಾತಾವರಣದಲ್ಲಿ ಮಕ್ಕಳಿಗೆ ಶಿಕ್ಷಣ ನೀಡುತ್ತಿದೆ.