ಸಂಜು ವೆಡ್ಸ್ ಗೀತಾ 2 ಸಿನಿಮಾದ ಚಿತ್ರದ ರೀರಿಲೀಸ್ ಡೇಟ್ ನ್ನು ಚಿತ್ರ ತಂಡ ಘೋಷಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಯ್ಯ, ಸಂಜು ವಡ್ಸ್ ಗೀತಾ ಜೂ 6 ರಂದು ರೀ ರಿಲೀಸ್ ಆಗಲಿದೆ. ತೆಲುಗಿನಲ್ಲಿ ಸ್ಟೇ ತಂದ ನಂತರ ಇದೀಗ ಮತ್ತೆ ಬಿಡುಗಡೆಗೆ ತಯಾರಾಗಿದೆ ಎಂದಿದ್ದಾರೆ.
ನಿರ್ಮಾಪಕ ಮಾತನಾಡಿ, ಹೈದರಾಬಾದ್ ನಲ್ಲಿ ಯಾರೋ ಸ್ಟೇ ತಂದಿದ್ದರು. ಸ್ಟೇ ವೆಕೇಟ್ ಮಾಡಿದೆ. ಇಪ್ಪತ್ತು ನಿಮಿಷ ಸೇರಿಸಿ ಮತ್ತೆ ಸಿನಿಮಾ ರಿಲೀಸ್ ಮಾಡುತ್ತಿದ್ದೇವೆ. ಈ ಬಗ್ಗೆ ಚರ್ಚೆ ನಡೆಸಿದ ನಂತರ ಮರುಬಿಡುಗಡೆ ಮಾಡುತ್ತಿದ್ದೇವೆ ಎಂದರು.
ನಿರ್ದೇಶಕ ನಾಗಶೇಖರ್ ಮಾತನಾಡಿ, ನಾಗಶೇಖರ್ ಪ್ರೊಡ್ಯೂಸರ್ ಎನ್ನುವುದಕ್ಕೆ ಸ್ಟೇ ತಂದರು. ಕೊನೆಯ 21 ನಿಮಿಷ ಬಹಳ ಹೃದಯಸ್ಪರ್ಶಿ ಭಾಗ. ಸ್ನೇಹಲೋಕ ಸಿನಿಮಾ ಬಗ್ಗೆ ಆತ್ಮವಿಶ್ವಾಸ ಇತ್ತು. ಆದರೆ, ಹೇಳಿದ ಹಾಗೆ ಆ ಸಿನಿಮಾ ಸೂಪರ್ ಹಿಟ್ ಆಯಿತು. ಇದು ವರಿಜಿನಲ್ ಸಿನಿಮಾ. ಜೂ 6 ಕ್ಕೆ ವಿಶ್ವದಾದ್ಯಂತ ರಿಲೀಸ್ ಮಾಡಲು ನಾವು ತಯಾರಿದ್ದೇವೆ. ಹೀಗಾಗಿ ಈ ಚೆಂಬರ್ ನಿಂದಲೇ ರಿಲೀಸ್ ಡೇಟ್ ಘೋಷಿಸಲಾಗುತ್ತಿದೆ ಎಂದಿದ್ದಾರೆ.
ಶಿವಣ್ಣ ಅವರ ಮುಖ್ಯಸ್ಥಿಕೆಯಲ್ಲಿ ಜೂ 5 ಕ್ಕೆ ಪ್ರೀ ರಿಲೀಸ್ ಮಾಡುವ ಯೋಚನೆಯಲ್ಲಿದ್ದೇವೆ. ಹಲವು ನಿರ್ದೇಶಕರು ಒಟ್ಟಿಗೆ ಈ ಸಿನಿಮಾ ನೋಡುವ ಭರವಸೆ ನೀಡಿದ್ದಾರೆ. ಕಾಲ ಬದಲಾಗಿದೆ. ಸಿನಿಮಾ ಜನ ನೋಡುತ್ತಿಲ್ಲ ಎಂದರು.
ಶ್ರೀನಗರ ಕಿಟ್ಟಿ ಮಾತನಾಡಿ, ಸಿನಿಮಾ ಅದ್ಭುತವಾಗಿದೆ. ಪ್ರಚಾರ ಕಾರ್ಯವನ್ನು ನಾವು ಶುರು ಮಾಡಿದ್ದೇವೆ. ಎಲ್ಲರ ಪ್ರೋತ್ಸಾಹ ಇರಲಿ ಎಂದರು.



















