ದಾವಣಗೆರೆ: ಬಸ್ ಗೆ, ಟ್ರೈನ್ ಗೆ ಬೆಂಕಿ ಇಡಿ ಎಂದವನನ್ನು ವಾರ ಕಳೆದರೂ ಬಂಧಿಸದಿರುವುದಕ್ಕೆ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.
ವಕ್ಫ ಬಿಲ್ ಗೆ ಕೇಂದ್ರ ಸರ್ಕಾರ ತಿದ್ದು ಪಡಿ ತಂದಿರುವುದನ್ನು ವಿರೋಧಿಸಿ ಮುಸ್ಲಿಂ ಮುಖಂಡ ಪ್ರಚೋಧನಕಾರಿ ಭಾಷಣ ಮಾಡಿದ್ದರು. ದಾವಣಗೆರೆಯಲ್ಲಿ ಮಹಾನಗರ ಪಾಲಿಕೆ ಮಾಜಿ ಕೈ ಸದಸ್ಯ ಅಹ್ಮದ್ ಕಬೀರ್ ಖಾನ್ ಪ್ರಚೋಧನಕಾರಿ ಭಾಷಣ ಮಾಡಿದ್ದ. ನಾವು ಸಿಎಂಗೆ, ಜಿಲ್ಲಾಧಿಕಾರಿಗೆ ವಕ್ಫ್ ತಿದ್ದುಪಡಿ ವಿರೋಧಿಸಿ ಮನವಿ ಮಾಡಿದರೆ, ಪ್ರಯೋಜನವಾಗುವುದಿಲ್ಲ.
ನಾವೆಲ್ಲ ಬೀದಿಗೆ ಇಳಿದು ಹೋರಾಟ ಮಾಡಬೇಕು. ಟ್ರೈನ್, ಬಸ್ ಗೆ ಬೆಂಕಿ ಇಡಬೇಕು. ಅವೆಲ್ಲ ಹೊತ್ತಿ ಉರಿಯಬೇಕು ಅಂದಾಗ ವಕ್ಫ್ ತಿದ್ದುಪಡಿ ವಾಪಸ್ ಪಡೆಯೋಕೆ ಸಾಧ್ಯ ಎಂದು ಕಬೀರ್ ಹೇಳಿದ್ದ.
ಫ್ಲೆಕ್ಸ್ ಹಿಡಿದು ಹೋರಾಟ ಮಾಡುತ್ತೇವೆ ಅಂದ್ರೆ ಯಾವುದೇ ರೀತಿಯ ಪ್ರಯೋಜನವಿಲ್ಲ. ಯುವಕರು ಬೀದಿಗಿಳಿದು ಹೊಡೆದು- ಬಡೆದು ಬೆಂಕಿ ಇಡಬೇಕು ಎಂದು ಮೊಬೈಲ್ ನಲ್ಲಿ ಪ್ರಚೋಧನಕಾರಿ ಭಾಷಣ ಮಾಡಿ ಹರಿ ಬಿಟ್ಟಿದ್ದ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಒಂದು ವಾರ ಕಳೆದರೂ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮುಸ್ಲಿಂ ಮುಖಂಡನ ವಿರುದ್ಧಕೂಡಲೇ ಕ್ರಮ ಕೈಗೊಳ್ಳಬೇಕೆಂದು ಎಸ್ಪಿ ಉಮಾ ಪ್ರಶಾಂತಗೆ ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.