ಪೆಟ್ರೋಲ್, ಡೀಸೆಲ್ ಬೆಲೆ ಕೇಳಿದರೆ ಭಾರತದಲ್ಲಿ ವಾಹನ ಸವಾರರು ಶಾಕ್ ಆಗುತ್ತಿದ್ದಾರೆ. ದಿನದಿಂದ ದಿನಕ್ಕೆ ಗಮನಮುಖಿಯಾಗುತ್ತಿರುವ ತೈಲ ಬೆಲೆ ಗ್ರಾಹಕರ ಕೈ ಸುಡುತ್ತಿದೆ.ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಆಧರಿಸಿ ಈ ದರಗಳು ಏರಿಳಿತ ಕಾಣುತ್ತಿವೆ. ಹಾಗಿದ್ದರೆ, ಅನ್ಯ ದೇಶಗಳಲ್ಲಿ ಪೆಟ್ರೋಲ್ ದರಗಳು ಎಷ್ಟಿವೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಅದರಲ್ಲೂ ಅತ್ಯಂತ ಅಗ್ಗದಲ್ಲಿ ತೈಲ ಸಿಗುವ ದೇಶ ಯಾವುದು ಎಂಬ ಕುತೂಹಲ ಹಲವರಿಗೆ ಇದೆ.
ಜಗತ್ತಿನಲ್ಲಿ ಅತ್ಯಂತ ಅಗ್ಗದ ತೈಲ ದೊರೆಯುವುದು ಇರಾನ್ ನಲ್ಲಿ. ಇಲ್ಲಿ ಲೀಟರ್ ಪೆಟ್ರೋಲ್ ದರ ಕೇವಲ 2 ರೂಪಾಯಿ 51 ಪೈಸೆ ಮಾತ್ರ. ಎರಡನೇ ಸ್ಥಾನದಲ್ಲಿ ಲಿಬಿಯಾ ದೇಶವಿದೆ.
ಇಲ್ಲಿ ಲೀಟರ್ ಪೆಟ್ರೋಲ್ ದರ ಕೇವಲ 2.52 ಪೈಸೆ. ವಿನೆಜುವೆಲಾದಲ್ಲಿ ಈ ದರ 3.03 ರೂಪಾಯಿಯಷ್ಟಿದ್ದರೆ, ಅಂಗೋಲಾದಲ್ಲಿ 28.44 ರೂ. ಈಜಿಪ್ಟ್ ನಲ್ಲಿ 29.29, ಅಲ್ಜೀರಿಯದಲ್ಲಿ 29.48, ಕುವೈತ್ ನಲ್ಲಿ 29.56, ಟರ್ಕ್ಮೇನಿಸ್ತಾನ್ ನಲ್ಲಿ 37.11, ಮಲೇಷಿಯಾದಲ್ಲಿ 40.49 ಹಾಗೂ ಖಜಕಿಸ್ತಾನದಲ್ಲಿ ಲೀಟರ್ ಪೆಟ್ರೋಲ್ ದರ 41.01 ರೂ. ಇದೆ. ಭಾರತದ ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಅಲ್ಲಿನ ರೂಪಾಯಿ ಲೆಕ್ಕದಲ್ಲಿ ಲೀಟರ್ ಗೆ 272 ರೂಪಾಯಿ ಇದ್ದರೆ, ಭಾರತದ ಕರೆನ್ಸಿಯಲ್ಲಿ ಈ ದರ 83.74 ರೂ. ಆಗುತ್ತೆ.