ನವದೆಹಲಿ : ಕೊಲ್ಲಿಯಲ್ಲಿರುವ ತೈಲಾಗಾರಗಳಿಗೆ ಬೆಂಕಿ ಬೀಳುತ್ತಿದೆ. ಹೀಗಾಗಿ ವಿಶ್ವಾದ್ಯಂತ ತೈಲಕ್ಕೆ ಹಾಹಾಕಾರ ಆರಂಭವಾಗಿದೆ. ಈ ತೈಲಾಘಾತ ಭಾರತಕ್ಕೂ ಆವರಿಸಿದೆ. ಭಾರತಕ್ಕೆ ತೈಲದ ಆತಂಕ, ಆಘಾತ ಈಗಿನದ್ದಷ್ಟೇ ಅಲ್ಲ, ಇಂದಿರಾ ಗಾಂಧಿ ಪ್ರಧಾನಿಯಾಗಿದ್ದ ಸಂದರ್ಭದಲ್ಲೂ ಇತ್ತು. ಆಗ ಇಂದಿರಾ ಗಾಂಧಿ ಈ ಸಮಸ್ಯೆ ಬಗೆಹರಿಸಿದ್ದು, ಪ್ರಶಂಸನೀಯ. ಈಗಲೂ ದೇಶಕ್ಕೆ ಎದುರಾಗಿರುವ ತೈಲ ಯುದ್ಧದಲ್ಲಿ ಪ್ರಧಾನಿ ಮೋದಿ ಗೆಲ್ತಾರಾ? ಅನ್ನೋ ಪ್ರಶ್ನೆ ಈಗ ಎದುರಾಗಿದೆ.
ವಿಶ್ವದ 5ನೇ ಒಂದು ಭಾಗದಷ್ಟು ತೈಲ ಸಾಗಾಣೆ ಮಾಡುವ ಹಾರ್ಮುಜ ಜಲಸಂಧಿ ಸಂಪೂರ್ಣ ಬಂದ್ ಆಗುವ ಆತಂಕ ಎದುರಾಗುತ್ತಿದೆ. ತೈಲ ಬೆಲೆ ಏರಿಕೆಯಾಗುತ್ತಿದೆ. ಸಹಜವಾಗಿ ಶೇ. 85ರಷ್ಟು ತೈಲ ಆಮದು ಮಾಡಿಕೊಳ್ಳುವ ಭಾರತಕ್ಕೆ ಆತಂಕ ಶುರುವಾಗಿದ್ದು ನಿಜ. ಏಕೆಂದರೆ ಭಾರತವು ವಿಶ್ವದಲ್ಲೇ ಮೂರನೇ ಅತಿ ದೊಡ್ಡ ತೈಲ ಗ್ರಾಹಕ ದೇಶ. 2030ರ ವೇಳೆಗೆ ಭಾರತದ ಬೇಡಿಕೆ ಇಡೀ ಜಗತ್ತಿನಲ್ಲೇ ಅತೀ ಹೆಚ್ಚಾಗಿರಲಿದೆ. ಈ ನಿಟ್ಟಿನಲ್ಲಿ ಭಾರತವು ಖರೀದಿಯ ಮೂಲವನ್ನು ವೈವಿಧ್ಯಗೊಳಿಸುವ ಅಗತ್ಯತೆ ಇದ್ದು, ಮಾರುಕಟ್ಟೆ ಗಾತ್ರ ಕೂಡ ಬಲಗೊಳಿಸಿಕೊಳ್ಳಬೇಕಿದೆ.
ಭಾರತಕ್ಕೆ 1973ರಲ್ಲೂ ಇದೇ ತೈಲ ಸಂದಿಗ್ಧತೆ ಎದುರಾಗಿತ್ತು. ಆ ವೇಳೆ ಅಮೆರಿಕ ಹಾಗೂ ರಷ್ಯಾಗಳ ಮಧ್ಯೆ ಜಗತ್ತು ಹರಿದು ಹಂಚಿ ಹೋಗಿದ್ದವು. ಭಾರತ ಆಗತಾನೇ ಅಭಿವೃದ್ಧಿಯ ಹಾದಿ ಹಿಡಿದಿತ್ತು. ಅಮೆರಿಕವು ರಷ್ಯಾ ಮೇಲೆ ನಿರ್ಬಂಧ ಹೇರಿತ್ತು. ಜಗತ್ತು ಅಸ್ತವ್ಯಸ್ಥವಾಗಿತ್ತು. ಪಶ್ಚಿಮ ದೇಶಗಳಿಗೆ ಅರಬ್ ನಿಂದ ತೈಲ ಮಾರಾಟ ನಿಂತು ಹೋಗಿತ್ತು. ಬೆಲೆಗಳು ಕೆಲವೇ ತಿಂಗಳುಗಳಲ್ಲಿ ನಾಲ್ಕು ಪಟ್ಟು ಹೆಚ್ಚಾಗಿದ್ದವು. ಯುರೋಪ್ ನಲ್ಲಿ ಕಾರ್ಖಾನೆಗಳು ಮುಚ್ಚಲ್ಪಟ್ಟವು. ಅಮೆರಿಕದಲ್ಲಿ ಕಾರುಗಳ ರಸ್ತೆಯಲ್ಲೇ ನಿಂತಿದ್ದವು.
ಆದರೆ, ದೊಡ್ಡ ದೊಡ್ಡ ಅಭಿವೃದ್ಧಿ ರಾಷ್ಟ್ರಗಳೇ ಕೈ ಚೆಲ್ಲಿ ಕುಳಿತಿದ್ದರೂ ಇಂದಿರಾ ಗಾಂಧಿ ಮಾತ್ರ ಸುಮ್ಮನೆ ಕೂಡಲಿಲ್ಲ. ಕರಾರುವಾಕ್ ಕಾರ್ಯತಂತ್ರದ ಹಲವು ನಿಯಮ ರೂಪಿಸಿದರು. ಸೋವಿಯತ್ ಒಕ್ಕೂಟಗಳಿಂದ ರಹಸ್ಯ ಒಪ್ಪಂದ ಮಾಡಿಕೊಂಡರು. ಡಾಲರ್ ಬದಲಿಗೆ ರೂಪಾಯಿಗಳಲ್ಲಿ ಹಣ ಪಾವತಿಸಿದರು. ಭಾರತೀಯ ಬಟ್ಟೆ, ಕೃಷಿ ಉತ್ಪನ್ನಗಳಿಗೆ ಪ್ರತಿಯಾಗಿ ಅಗ್ಗದ ತೈಲ ಪಡೆಯಲಾಯಿತು. ಇಂದಿರಾ ಗಾಂಧಿ ಈ ಚಾಣಾಕ್ಷ ನಡೆಯಿಂದಾಗಿ ಭಾರತದ ಕಾರ್ಖಾನೆ, ದೀಪಗಳು ಉರಿಯಲು ಆರಂಭಿಸಿದವು. ಹೀಗಾಗಿ ಇಡೀ ರಾಷ್ಟ್ರಕ್ಕೆ ಎದುರಾಗಿದ್ದ ದೊಡ್ಡ ತೈಲ ಸಂಕಷ್ಟ ಭಾರತದ ಹತ್ತಿರ ಸುಳಿಯಲೂ ಇಲ್ಲ.
1976ರಲ್ಲಿ ಸಹಿಯಾದ ಆ ಒಪ್ಪಂದ ನಂತರದ ನಾಲ್ಕು ವರ್ಷಗಳಲ್ಲಿ 5.5 ಮಿಲಿಯನ್ ಟನ್ ತೈಲ ಆಮದು ಮಾಡಿಕೊಳ್ಳಲಾಯಿತು. ಇವೆಲ್ಲವೂ ಡಾಲರ್ ಬದಲಾಗಿ ರೂಪಾಯಿ ಲೆಕ್ಕಾಚಾರದಲ್ಲಿ ನಡೆದ ವ್ಯವಹಾರವಾಗಿತ್ತು. ಹೀಗಾಗಿ ಭಾರತದ ವೆಚ್ಚ ಅರ್ಧದಷ್ಟೂ ಕಡಿಮೆಯಾಗಿ ಭಾಂಬೆ, ಹೈನ್ ನಂತಹ ಪ್ರಮುಖ ಸೌಲಭ್ಯಗಳ ನಿರ್ಮಾಣಕ್ಕೆ ಇಂದಿರಾ ಗಾಂಧಿ ಆ ನಿರ್ಣಯ ಸಹಾಯ ಮಾಡಿತು.
ಈಗ ಅದೇ ಸ್ಥಿತಿ ಪ್ರಧಾನಿ ಮೋದಿ ಅವರಿಗೆ ಎದುರಾಗಿದೆ. ಈಗಾಗಲೇ ಮೋದಿ ಕಾರ್ಯತಂತ್ರದ ಭಾಗವಾಗಿ ಭಾರತವು ತೈಲದಲ್ಲಿ ಒಂದು ಕಾರ್ಯತಂತ್ರದಲ್ಲಿ ಗೆಲುವು ಸಾಧಿಸಿದೆ. ಅದರ ಮದ್ಯೆ ಈಗ ದೊಡ್ಡ ಸಂದಿಗ್ಧತೆ ಎದುರಾಗಿದೆ. 2020ರ ಕೋವಿಡ್ ಸಮಯದಲ್ಲಿ ಭಾರತ-ಸಂಸ್ಕರಣಾಗಾರಗಳು 20 ದೊಡ್ಡ ಟ್ಯಾಂಕರ್ ಗಳನ್ನು ಬಾಡಿಗೆ ಪಡೆದು 40 ಮಿಲಿಯನ್ ಬ್ಯಾರೆಲ್ ತೈಲವನ್ನ ಅತಿ ಕಡಿಮೆ ಬೆಲೆಗೆ ಸಂಗ್ರಹಿಸಿದ್ದವು. ರಷ್ಯಾದೊಂದಿಗೆ 2022ಕ್ಕಿಂತ ಮೊದಲು ಭಾರತವು ಶೇ. 1ರಷ್ಟು ತೈಲ ಆಮದು ಮಾಡಿಕೊಳ್ಳುತ್ತಿತ್ತು.
ಆದರೆ, ಈಗ ಶೇ. 40ರಷ್ಟು ಆಮದಾಗುತ್ತಿದೆ. ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದ ಮೇಲೆ ನಿರ್ಬಂಧ ಹೇರಿದರೂ ಭಾರತದ ಸಂಸ್ಕರಣಾಗಾರಾಗಳು ರಷ್ಯಾದ ಕಚ್ಚಾ ತೈಲ ಸಂಗ್ರಹಿಸಿ, ಯುರೋಪಪ್ ಗೆ ಅಗತ್ಯ ಇಂಧನ ಪೂರೈಸಿದೆ. 2030ರ ವೇಳೆಗೆ ಭಾರತಕ್ಕೆ ದಿನಕ್ಕೆ 9 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಬೇಕಾಗಬಹುದು. ಈಗಾಗಲೇ ಭಾರತವು ಅಮೆರಿಕದೊಂದಿಗೆ ಮೀಥೇನ್ ಶೇಲ್ ಗ್ಯಾಸ್ ಒಪ್ಪಂದ ಮಾಡಿಕೊಂಡಿದೆ. ಜೊತೆಗೆ ಸೌರ ಇಂಧನ ಶಕ್ತಿಯಂತಹ ಹಸಿರು ಇಂಧನದತ್ತ ಗಮನ ಹರಿಸಿದೆ. ಇವುಗಳ ಮಧ್ಯೆಯೂ ಮೋದಿ ಕೊಲ್ಲಿಯಿಂದಾಗಿ ಎದುರಾಗಿರುವ ‘ತೈಲ’ ಯುದ್ಧ ಗೆಲ್ಲಬೇಕಿದೆ.
ಇದನ್ನೂ ಓದಿ : ನೇಣಿಗೆ ಕೊರಳೊಡ್ಡಿದ ವೈದ್ಯಕೀಯ ವಿದ್ಯಾರ್ಥಿನಿ.. ಡೆತ್ ನೋಟ್‌ನಲ್ಲಿತ್ತು ಸ್ಫೋಟಕ ಮಾಹಿತಿ!



















