ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ತಮ್ಮ 8ನೇ ಬಜೆಟ್ ಮಂಡಿಸುತ್ತಿದ್ದು, ಹಿಂದಿನ ಬಜೆಟ್(Budget) ನಿಂದಲೂ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೂ ಕೂಡ ತಮ್ಮ ಹಿಂದಿನ ಬಜೆಟ್ಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಹೊಸ ಟ್ಯಾಕ್ಸ್ ರಿಜೈಮ್, ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಸ್ಟಾಂಡರ್ಡ್ ಡಿಡಕ್ಷನ್ ಸೇರಿದಂತೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಹಲವಾರು ಸುಧಾರಣೆಗಳನ್ನು ತಂದಿದೆ.
ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ
ಹಿಂದಿನ ಬಜೆಟ್ ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ನ್ನು(Standard Deduction) 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಸಲಾಯಿತು. ಈ ಸಂಬಳದ ಆದಾಯ ಪಡೆಯುವವರಿಗೆ. ಕುಟುಂಬ ಪಿಂಚಣಿ(Family Pension) ಪಡೆಯುವವರಿಗೆ ಸ್ಟಾಂಡರ್ಡ್ ಡಿಡಕ್ಷನ್ ನ್ನು 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಸಲಾಯಿತು. ಇದರಿಂದಾಗಿ 7.75 ಲಕ್ಷ ರೂ ವಾರ್ಷಿಕ ಆದಾಯ(Annual income) ಪಡೆಯುತ್ತಿರುವ ಜನರು ತೆರಿಗೆ ಕಟ್ಟದಂತಾಯಿತು.
ಆದಾಯ ತೆರಿಗೆ ಹೊಸ ಸ್ಲಾಬ್
ವಾರ್ಷಿಕ ಮೂರು ಲಕ್ಷ ರೂ. ವರೆಗಿನ ಆದಾಯಕ್ಕೆ ಯಾವ ತೆರಿಗೆ ಇಲ್ಲ. 3ರಿಂದ 7 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ; 7-10 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ, 10ರಿಂದ 12 ಲಕ್ಷ ರೂ. ಆದಾಯಕ್ಕೆ ಶೇ. 15 ತೆರಿಗೆ, 12 ರಿಂದ 15 ಲಕ್ಷ ರೂ. ಆದಾಯಕ್ಕೆ ಶೇ. 20ರಷ್ಟು ತೆರಿಗೆ, 15 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ನಿಗದಿ ಮಾಡಲಾಯಿತು.
ಹೊಸ ಟ್ಯಾಕ್ಸ್ ರಿಜೈಮ್
2020ರ ಬಜೆಟ್ನಲ್ಲಿ ಹೊಸ ಆದಾಯ ತೆರಿಗೆ ಸಿಸ್ಟಂ (Income Tax System) ಜಾರಿ ಮಾಡಲಾಯಿತು. ಹಿಂದಿನ ಹಳೆಯ ಟ್ಯಾಕ್ಸ್ ರಿಜೈಮ್ ಉಳಿಸಿಕೊಂಡು ಹೊಸ ಟ್ಯಾಕ್ಸ್ ರಿಜೈಮ್ ತರಲಾಯಿತು. ಐಟಿ ಪಾವತಿದಾರರು ಬೇಕಾದಲ್ಲಿ ಹಳೆಯ ಟ್ಯಾಕ್ಸ್ ರಿಜೈಮ್ನಲ್ಲೇ ಐಟಿ ರಿಟರ್ನ್ ಫೈಲ್ ಮಾಡಬಹುದು ಎಂಬುವುದಕ್ಕೆ ದಾರಿ ಮಾಡಿಕೊಡಲಾಯಿತು.
ಕ್ಯಾಪಿಟಲ್ ಗೇನ್ ಟ್ಯಾಕ್ಸ್
ಬಜೆಟ್ನಲ್ಲಿ (2024ರದ್ದು) ಕ್ಯಾಪಿಟಲ್ ಗೇನ್ ಟ್ಯಾಕ್ಸ್(Capital Gains Tax) ಸಿಸ್ಟಂನಲ್ಲಿ ಒಂದಷ್ಟು ಬದಲಾವಣೆ ತರಲಾಯಿತು. ಕಿರು ಅವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಸ್ಟಿಸಿಜಿ) ಶೇ. 15ರಿಂದ ಶೇ. 20ಕ್ಕೆ ಹೆಚ್ಚಿಸಲಾಯಿತು. ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಲ್ಟಿಸಿಜಿ) ಶೇ. 20ರಿಂದ ಶೇ. 12.5ಕ್ಕೆ ಇಳಿಸಲಾಯಿತು.
ಟ್ಯಾಕ್ಸ್ ರಿಬೇಟ್
ಟ್ಯಾಕ್ಸ್ ರಿಬೇಟ್ ಅಥವಾ ತೆರಿಗೆ ವಿನಾಯಿತಿ(Tax Exemption) ಸೌಲಭ್ಯವನ್ನು 5 ಲಕ್ಷ ರೂ ಆದಾಯ ಗಳಿಸುತ್ತಿರುವವರಿಗೆ ನೀಡಲಾಗಿತ್ತು. 7 ಲಕ್ಷ ರೂ.ಗೆ ಏರಿಸಲಾಯಿತು. ಅಂದರೆ, ಏಳೂವರೆ ಲಕ್ಷ ರೂವರೆಗೆ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಪಾವತಿಯಿಂದ ವಿನಾಯಿತಿ ಸಿಕ್ಕಂತಾಗಿದೆ. ಇದು ಸೇರಿದಂತೆ ಹಲವಾರು ಸುಧಾರಣೆಗಳನ್ನು ನಿರ್ಮಲಾ ಸೀತಾರಾಮಾನ್ ಜಾರಿಗೆ ತಂದಿದ್ದಾರೆ.
ಹಿಂದಿನ ಬಜೆಟ್ ನಿಂದಾದ ಬದಲಾವಣೆ ಏನು?
ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್(Nirmala Sitharaman) ಇಂದು ತಮ್ಮ 8ನೇ ಬಜೆಟ್ ಮಂಡಿಸುತ್ತಿದ್ದು, ಹಿಂದಿನ ಬಜೆಟ್ ನಿಂದಲೂ ಹಲವಾರು ಸುಧಾರಣಾ ಕ್ರಮಗಳನ್ನು ಜಾರಿಗೊಳಿಸಿದ್ದಾರೆ. ನಿರ್ಮಲಾ ಸೀತಾರಾಮನ್ ಅವರೂ ಕೂಡ ತಮ್ಮ ಹಿಂದಿನ ಬಜೆಟ್ಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತಂದಿದ್ದಾರೆ. ಹೊಸ ಟ್ಯಾಕ್ಸ್ ರಿಜೈಮ್,(Tax regime) ಕ್ಯಾಪಿಟಲ್ ಗೇನ್ ಟ್ಯಾಕ್ಸ್, ಸ್ಟಾಂಡರ್ಡ್ ಡಿಡಕ್ಷನ್ ಸೇರಿದಂತೆ ನಿರ್ಮಲಾ ಸೀತಾರಾಮನ್ ಅವರ ಬಜೆಟ್ ಹಲವಾರು ಸುಧಾರಣೆಗಳನ್ನು ತಂದಿದೆ.
ಸ್ಟಾಂಡರ್ಡ್ ಡಿಡಕ್ಷನ್ ಏರಿಕೆ
ಹಿಂದಿನ ಬಜೆಟ್ ನಲ್ಲಿ ಹೊಸ ಟ್ಯಾಕ್ಸ್ ರಿಜೈಮ್ ನಲ್ಲಿ ಸ್ಟಾಂಡರ್ಡ್ ಡಿಡಕ್ಷನ್ ನ್ನು(Standard Deduction) 50 ಸಾವಿರ ರೂ.ನಿಂದ 75 ಸಾವಿರ ರೂ.ಗೆ ಏರಿಸಲಾಯಿತು. ಈ ಸಂಬಳದ ಆದಾಯ ಪಡೆಯುವವರಿಗೆ. ಕುಟುಂಬ ಪಿಂಚಣಿ ಪಡೆಯುವವರಿಗೆ ಸ್ಟಾಂಡರ್ಡ್ ಡಿಡಕ್ಷನ್ ನ್ನು 15 ಸಾವಿರ ರೂ.ನಿಂದ 25 ಸಾವಿರ ರೂ.ಗೆ ಏರಿಸಲಾಯಿತು. ಇದರಿಂದಾಗಿ 7.75 ಲಕ್ಷ ರೂ ವಾರ್ಷಿಕ ಆದಾಯ ಪಡೆಯುತ್ತಿರುವ ಜನರು ತೆರಿಗೆ ಕಟ್ಟದಂತಾಯಿತು.
ಆದಾಯ ತೆರಿಗೆ ಹೊಸ ಸ್ಲಾಬ್
ವಾರ್ಷಿಕ ಮೂರು ಲಕ್ಷ ರೂ. ವರೆಗಿನ ಆದಾಯಕ್ಕೆ ಯಾವ ತೆರಿಗೆ ಇಲ್ಲ. 3ರಿಂದ 7 ಲಕ್ಷ ರೂವರೆಗಿನ ಆದಾಯಕ್ಕೆ ಶೇ. 5 ರಷ್ಟು ತೆರಿಗೆ; 7-10 ಲಕ್ಷ ರೂ ಆದಾಯಕ್ಕೆ ಶೇ. 10ರಷ್ಟು ತೆರಿಗೆ, 10ರಿಂದ 12 ಲಕ್ಷ ರೂ. ಆದಾಯಕ್ಕೆ ಶೇ. 15 ತೆರಿಗೆ, 12 ರಿಂದ 15 ಲಕ್ಷ ರೂ. ಆದಾಯಕ್ಕೆ ಶೇ. 20ರಷ್ಟು ತೆರಿಗೆ, 15 ಲಕ್ಷ ರೂ. ಮೇಲ್ಪಟ್ಟ ಆದಾಯಕ್ಕೆ ಶೇ. 30ರಷ್ಟು ತೆರಿಗೆ ನಿಗದಿ ಮಾಡಲಾಯಿತು.
ಹೊಸ ಟ್ಯಾಕ್ಸ್ ರಿಜೈಮ್
2020ರ ಬಜೆಟ್ನಲ್ಲಿ ಹೊಸ ಆದಾಯ ತೆರಿಗೆ ಸಿಸ್ಟಂ(Income Tax System) ಜಾರಿ ಮಾಡಲಾಯಿತು. ಹಿಂದಿನ ಹಳೆಯ ಟ್ಯಾಕ್ಸ್ ರಿಜೈಮ್ ಉಳಿಸಿಕೊಂಡು ಹೊಸ ಟ್ಯಾಕ್ಸ್ ರಿಜೈಮ್ ತರಲಾಯಿತು. ಐಟಿ ಪಾವತಿದಾರರು ಬೇಕಾದಲ್ಲಿ ಹಳೆಯ ಟ್ಯಾಕ್ಸ್ ರಿಜೈಮ್ನಲ್ಲೇ ಐಟಿ ರಿಟರ್ನ್ ಫೈಲ್ ಮಾಡಬಹುದು ಎಂಬುವುದಕ್ಕೆ ದಾರಿ ಮಾಡಿಕೊಡಲಾಯಿತು.
ಕ್ಯಾಪಿಟಲ್ ಗೇನ್ ಟ್ಯಾಕ್ಸ್
ಬಜೆಟ್ನಲ್ಲಿ (2024ರದ್ದು) ಕ್ಯಾಪಿಟಲ್ ಗೇನ್ ಟ್ಯಾಕ್ಸ್ (Capital Gains Tax) ಸಿಸ್ಟಂನಲ್ಲಿ ಒಂದಷ್ಟು ಬದಲಾವಣೆ ತರಲಾಯಿತು. ಕಿರು ಅವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಸ್ಟಿಸಿಜಿ) ಶೇ. 15ರಿಂದ ಶೇ. 20ಕ್ಕೆ ಹೆಚ್ಚಿಸಲಾಯಿತು. ದೀರ್ಘಾವಧಿ ಲಾಭ ಹೆಚ್ಚಳ ತೆರಿಗೆಯನ್ನು (ಎಲ್ಟಿಸಿಜಿ) ಶೇ. 20ರಿಂದ ಶೇ. 12.5ಕ್ಕೆ ಇಳಿಸಲಾಯಿತು.
ಟ್ಯಾಕ್ಸ್ ರಿಬೇಟ್
ಟ್ಯಾಕ್ಸ್ ರಿಬೇಟ್ ಅಥವಾ ತೆರಿಗೆ ವಿನಾಯಿತಿ ಸೌಲಭ್ಯವನ್ನು 5 ಲಕ್ಷ ರೂ ಆದಾಯ ಗಳಿಸುತ್ತಿರುವವರಿಗೆ ನೀಡಲಾಗಿತ್ತು. 7 ಲಕ್ಷ ರೂ.ಗೆ ಏರಿಸಲಾಯಿತು. ಅಂದರೆ, ಏಳೂವರೆ ಲಕ್ಷ ರೂವರೆಗೆ ವಾರ್ಷಿಕ ಆದಾಯ ಇರುವವರಿಗೆ ಟ್ಯಾಕ್ಸ್ ಪಾವತಿಯಿಂದ ವಿನಾಯಿತಿ ಸಿಕ್ಕಂತಾಗಿದೆ. ಇದು ಸೇರಿದಂತೆ ಹಲವಾರು ಸುಧಾರಣೆಗಳನ್ನು ನಿರ್ಮಲಾ ಸೀತಾರಾಮಾನ್ ಜಾರಿಗೆ ತಂದಿದ್ದಾರೆ.