ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣಕ್ಕೆಸಂಬಂಧಿಸಿದಂತೆ ಸೆಲೆಬ್ರಿಟಿಗಳ ಮಧ್ಯೆ ವ್ಯತಿರಿಕ್ತ ಹೇಳಿಕೆಗಳು ಕೇಳಿ ಬರುತ್ತಿವೆ. ಹಲವರು ಇಲ್ಲಿಯವರೆಗೂ ಮೌನ ವಹಿಸಿದ್ದರೆ, ಇನ್ನೂ ಹಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಾರೆ. ಹಲವರು ಜೈಲಿಗೆ ತೆರಳಿ ದರ್ಶನ್ ರನ್ನು ಭೇಟಿ ಮಾಡಿದ್ದಾರೆ.
ಈಗ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ನಟ ಅನಂತ್ ನಾಗ್(Ananth Nag) ಪ್ರತಿಕ್ರಿಯೆ ನೀಡಿದ್ದಾರೆ. ದರ್ಶನ್ ಘಟನೆ ಸಮಾಜಕ್ಕೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಹೇಳಿದ್ದಾರೆ.
ಇಂತಹ ಘಟನೆಗಳು ಸಮಾಜದ ಎಲ್ಲ ಕಡೆ ನಡೆಯುತ್ತವೆ. ಆದರೆ, ಈ ಘಟನೆ ಸಮಾಜದ ಮೇಲೆ ಪ್ರಭಾವ ಬೀರುತ್ತದೆ ಎಂಬುವುದನ್ನು ನಾನು ಒಪ್ಪುವುದಿಲ್ಲ. ಇದಕ್ಕಿಂತ ಸಾವಿರ ಪಟ್ಟು ದೇಶ- ದೇಶಗಳ ನಡುವೆ ಮತ್ತು ರಾಜ್ಯ- ರಾಜ್ಯಗಳ ನಡುವೆ ನಡೆಯುತ್ತವೆ. ಇದು ಆ ರೀತಿಯ ಪ್ರಭಾವ ಬೀರಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ದರ್ಶನ್ ಸುದ್ದಿಯಿಂದ ಹೆಚ್ಚು ಪಬ್ಲಿಸಿಟಿ ಸಿಗಬಹುದು ಅಷ್ಟೇ. ಸಮಾಜದ ಮೇಲೆ ಪರಿಣಾಮ ಬೀರುವುದು ಸುಳ್ಳು ಎಂದು ಹಿರಿಯ ನಟ ಅಭಿಪ್ರಾಯ ಪಟ್ಟಿದ್ದಾರೆ.