ರಾಯಚೂರು: ಜಾತಿಗಣತಿ ವರದಿಯನ್ನು ಓಪನ್ ಮಾಡಲಾಗಿದೆ. ಮೊದಲ ಬಾರಿಗೆ ಲಕೋಟೆಯನ್ನು ತೆರೆಯಲಾಗಿದೆ. ಏ. 17ರಂದು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡೋಣ. ಎಲ್ಲರೂ ಓದಿಕೊಂಡು ಬನ್ನಿ ಎಂದು ಸಿಎಂ ಹೇಳಿದ್ದಾರೆ. ಈ ಕುರಿತು ಯಾವುದೇ ಗೊಂದಲ ಇಲ್ಲ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣ್ ಪ್ರಕಾಶ ಪಾಟೀಲ್ ಹೇಳಿದ್ದಾರೆ.
ರಾಯಚೂರಿನ ಒಳಾಂಗಣ ಕ್ರೀಡಾಂಗಣದಲ್ಲಿ ಟೇಬಲ್ ಟೆನ್ನಿಸ್ ಕೋರ್ಟ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ಕುರಿತು ಏ. 17ರಂದು ಚರ್ಚೆ ಮಾಡುತ್ತೇವೆ ಎಂದಿದ್ದಾರೆ.
ಕಾಂಗ್ರೆಸ್ ಸರ್ಕಾರದ ವಿರುದ್ದ ಜೆಡಿಎಸ್ ಹೋರಾಟ ನಡೆಸುತ್ತಿರುವ ವಿಚಾರವಾಗಿ ಮಾತನಾಡಿದ ಅವರು, ಜೆಡಿಎಸ್ ಸರ್ಕಾರ ಇತ್ತು. ನಾವು ಕೂಡ ಅವರಿಗೆ ಸಪೋರ್ಟ್ ಮಾಡಿದ್ದೇವೆ. ಎರಡು ಸಲ ಕಾಂಗ್ರೆಸ್ ಸಪೋರ್ಟ್ ನಿಂದಲೇ ಸಿಎಂ ಆಗಿದ್ದಾರೆ. ನಮ್ಮ ಕಾಂಗ್ರೆಸ್ ಸಪೋರ್ಟ್ ನಿಂದಲೇ ಪ್ರಧಾನಮಂತ್ರಿ ಆಗಿದ್ದಾರೆ. ಅಧಿಕಾರ ಅನುಭವಿಸುವಾಗ ಕಾಂಗ್ರೆಸ್ ಬೇಕು. ಅಧಿಕಾರ ಹೋದ ಮೇಲೆ ಸಾಕಪ್ಪ ಸಾಕು ಅಂತಾ ಹೇಳುವವರನ್ನು ತುಂಬಾ ಜನರನ್ನು ನೋಡಿದ್ದೇವೆ ಎಂದು ವ್ಯಂಗ್ಯವಾಡಿದ್ದಾರೆ.