ಬೆಂಗಳೂರು: ಆಪರೇಷನ್ ಸಿಂಧೂರ್ ಬಗ್ಗೆ ಗೃಹ ಸಚಿವ ಡಾ. ಜಿ.ಪರಮೇಶ್ವರ್ ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಫೆನ್ಸ್ ಮಿನಿಸ್ಟರಿ ಕ್ರಮಕ್ಕೆ ನಮಗೆ ಹೆಮ್ಮೆ ಇದೆ. ದೇಶದ ಹಿತಕ್ಕೆ ನಾವೆಲ್ಲ ಒಂದಾಗಿರುತ್ತೇವೆ ಎಂದು ಹೇಳಿದ್ದೇವೆ. ನಮಗೆ ಕೇಂದ್ರ ಸರ್ಕಾರದಿಂದ ಸಲಹೆ, ಸೂಚನೆ ಬಂದಿದೆ.
ಸಿವಿಲ್ ಡಿಫೆನ್ಸ್ ಹೇಗೆ ಮಾಡಬೇಕು ಅಂತ ಸೂಚನೆ ಬಂದಿದೆ. ಡ್ಯಾಮ್ ಗಳು, ಏರ್ ರ್ಪೋರ್ಟ್ ಗಳಲ್ಲಿ ಭದ್ರತೆ ಕೈಗೊಂಡಿದ್ದೇವೆ. ಎಲ್ಲೆಲ್ಲಿ ಭದ್ರತೆ ಬೇಕು ಅದನ್ನು ನೀಡುತ್ತೇವೆ. ಕೇಂದ್ರದ ಇಂಟೆಲಿಜೆನ್ಸ್ ಜೊತೆಗೆ ಸಂಪರ್ಕ ಇಟ್ಟುಕೊಂಡಿದ್ದೇವೆ. ಸಿವಿಲ್ ಡಿಫೆನ್ಸ್ ಗಾಗಿ ಮಾಕ್ ಡ್ರಿಲ್ ನಾಲ್ಕು ಗಂಟೆಗೆ ಮಾಡುತ್ತಿದ್ದೇವೆ. ಜಿಲ್ಲಾ ಕೇಂದ್ರಗಳಿಗೂ ಮಾಹಿತಿ ನೀಡಿದ್ದೇವೆ. ಕೇಂದ್ರ ಸರ್ಕಾರ ಕೂಡ ರಕ್ಷಣೆ ಕೊಡುತ್ತಿದೆ. ರಾಜ್ಯಗಳು ಎಲ್ಲಿ ರಕ್ಷಣೆ ಕೊಡಬೇಕೋ? ಅಲ್ಲೆಲ್ಲ ನಾವು ರಕ್ಷಣೆ ಕೊಡುತ್ತಿದ್ದೇವೆ ಎಂದು ಹೇಳಿದ್ದಾರೆ.
ಪಾಕಿಸ್ತಾನದ ಪ್ರಜೆಗಳನ್ನು ಮರಳಿ ಕಳುಹಿಸಿದ್ದೇವೆ. ಎಲ್ಲರ ಮಾಹಿತಿ ಕೇಂದ್ರಕ್ಕೆ ನೀಡಿದ್ದೇವೆ ಎಂದಿದ್ದಾರೆ.



















