ಹಾಸನ: ಸಚಿವ ಕೆ.ಎನ್. ರಾಜಣ್ಣ ವಿರುದ್ಧದ ಹನಿಟ್ರ್ಯಾಪ್ ವಿಚಾರವಾಗಿ ವಿಧಾನ ಪರಿಷತ್ ಸದಸ್ಯ ಸೂರಜ್ ರೇವಣ್ಣ ಮಾತನಾಡಿದ್ದಾರೆ.
ಹಾಸನದ ಗೊರೂರಿನಲ್ಲಿ ಮಾತನಾಡಿದ ಅವರು, ರಾಜಕೀಯ ವ್ಯವಸ್ಥೆಯಲ್ಲಿದ್ದವರು ನಿರ್ದಿಷ್ಟವಾದ ಪಾರದರ್ಶಕ ರಾಜಕಾರಣ ಮಾಡಬೇಕು. ವೈಯಕ್ತಿಕ ಕಾರಣ ಇಟ್ಟುಕೊಂಡು, ತಾವು ಸಿಎಂ ಆಗುವುದಕ್ಕೋಸ್ಕರ ಇನ್ನೊಬ್ಬ ರಾಜಕಾರಣಿಗಳ ಹನಿಟ್ರ್ಯಾಪ್ ಮಾಡುವುದು ತಪ್ಪು. ಇಂಡೈರೆಕ್ಟ್ ಬ್ಲಾಕ್ ಮೇಲ್, ಕಂಟ್ರೋಲ್ ಇಟ್ಟುಕೊಳ್ಳಲು ಯತ್ನಿಸುವುದು ಒಳ್ಳೆಯ ಬೆಳವಣಿಗೆ ಅಲ್ಲ ಎಂದು ಸೂರಜ್ ಡಿಸಿಎಂ ವಿರುದ್ಧ ಆರೋಪ ಮಾಡಿದ್ದಾರೆ.
ರಾಜಕಾರಣದಲ್ಲಿ ಇದು ಒಳ್ಳೆಯದಲ್ಲ. ರಾಜ್ಯದ ಜನ ನೋಡುತ್ತಿದ್ದಾರೆ. ಯಾರು ಏನೂ ಸುಮ್ನೆ ಕೂತಿಲ್ಲ. ಈ ಕೆಟ್ಟ ವ್ಯವಸ್ಥೆ ನಮ್ಮ ಕರ್ನಾಟಕದಲ್ಲಿ ದು:ಸ್ಥಿತಿಗೆ ಕಾರಣವಾಗುತ್ತಿದೆ.
ಕಾಂಗ್ರೆಸ್ ನವರೇ ತಾವೇ ಈ ವಿಷಯವಾಗಿ ಕಿತ್ತಾಡುತ್ತಿದ್ದಾರೆ. ಯಾರೇ ಇರಲಿ ನೇರವಾಗಿ ರಾಜಕಾರಣ ಮಾಡಬೇಕು. ಅದನ್ನು ಬಿಟ್ಟು ಹೀಗೆ ಆದ್ರೆ ಜನ ನಮ್ಮ ಮೇಲೆ ನಂಬಿಕೆ ಹೇಗೆ ಇಡಬೇಕು? 48 ಜನ ನಾಯಕರ ವಿರುದ್ಧ ಹನಿಟ್ರ್ಯಾಪ್ ಆಗಿದೆ ಎಂಬ ಆರೋಪ ಕೇಳಿ ಬಂದಿದೆ. ಇದನ್ನು ಕೇಳಿ ಆಘಾತವಾಯಿತು ಎಂದಿದ್ದಾರೆ.