ಬೆಂಗಳೂರು: ಹನಿಟ್ರ್ಯಾಪ್ ಪ್ರಕರಣ ರಾಜಕೀಯ ಪಡಸಾಲೆಯಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಆರೋಪ-ಪ್ರತ್ಯಾರೋಪಗಳು ಕೂಡ ಜೋರಾಗುತ್ತಿವೆ. ಈ ಮಧ್ಯೆ ಹನಿಟ್ರ್ಯಾಪ್ ಬಗ್ಗೆ ಗಂಭೀರ ಆರೋಪ ಮಾಡಿರುವ ಸಚಿವ ಕೆ.ಎನ್. ರಾಜಣ್ಣ ಮತ್ತೊಮ್ಮೆ ಮಾತನಾಡಿದ್ದಾರೆ.
ಸಚಿವ ರಾಜಣ್ಣ ‘ಹಲೋ ಅಂದ್ರೆ ಆ ಕಡೆಯಿಂದ ಹಲೋ ಅಂತಾರೆಂಬ’ ಡಿಕೆ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅದು ಅವರ ಅನುಭವ ಹೇಳಿರುತ್ತಾರೆ. ನಾನ್ಯಾರಿಗೂ ಕೆಟ್ಟದ್ದು ಬಯಸಿಲ್ಲ, ನಮಗಾದ ರೀತಿ ಯಾರಿಗೂ ಆಗಬಾರದು. ಕಾನೂನು ಕ್ರಮ ತೆಗೆದುಕೊಳ್ಳಬೇಕಾಗಿದೆ. ಅದಕ್ಕೆ ಗೃಹ ಮಂತ್ರಿಗಳನ್ನ ಭೇಟಿ ಮಾಡಿ ಲಿಖಿತ ರೂಪದಲ್ಲಿ ದೂರು ಕೊಡುತ್ತೇನೆ. ಮೂರು ದಿನ ಬ್ಯೂಸಿ ಇದ್ದೇನೆ. ಆನಂತರ ದೂರು ನೀಡುತ್ತೇನೆ ಎಂದಿದ್ದಾರೆ.
ನನಗೆ ಮಾಟ ಮಂತ್ರ ನಿಂಬೆಹಣ್ಣು, ಹೂ ಹಾಕೋದು, ಮೊಳೆ ಹಾಕೋದು ಅದೆಲ್ಲಾ ಮಾಡುತ್ತಾರೆ ಎಂದು ಅಸಮಾಧಾನ ಹೊರಹಾಕಿದರು.
ನಾನು ಯಾವತ್ತು ಯಾರಿಗೂ ಕೆಟ್ಟದ್ದು ಬಯಸಿಲ್ಲ. ಯಾರು ಕೆಟ್ಟದ್ದಯ ಬಯಸುತ್ತಾರೋ ಅವರು ಉದ್ದಾರ ಆಗಿಲ್ಲ, ನೂರಾರು ಉದಾಹರಣೆಗಳಿವೆ. ಬೇರೆಯವರಿಗೆ ಕೆಟ್ಟದು ಮಾಡಿ ನನ್ನಗೇನು ಲಾಭ ಆಗಬೇಕಿಲ್ಲ. ನಮಗಾದ ರೀತಿ ಬೇರೆಯವರಿಗೆ ಆಗಬಾರದು ಎಂದು ಕಿಡಿಕಾರಿದ್ದಾರೆ.