ನಟ ಸುದೀಪ್ ಅಭಿನಯದ ಮ್ಯಾಕ್ಸ್ ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದ್ದು, ಬಾಕ್ಸ್ ಆಫೀಸ್ ಕೊಳ್ಳೆ ಹೊಡೆಯುತ್ತಿದೆ. ಈಗ ಚಿತ್ರದ ಯಶಸ್ಸು ಸೇರಿದಂತೆ ಸಕ್ಸಸ್ ಸೆಲೆಬ್ರೇಶನ್ನ ಕೇಕ್ಗೆ ಸಂಬಂಧಿಸಿದಂತೆ ಸ್ವತಃ ಕಿಚ್ಚ ಸುದೀಪ್ ಮಾತನಾಡಿದ್ದಾರೆ.
ಸಿನಿಮಾ ಸಂಭ್ರಮದಲ್ಲಿ ಸುದೀಪ್ ತಮ್ಮ ಪತ್ನಿ ಮತ್ತು ತಮ್ಮವರೊಂದಿಗೆ ಸೇರಿ ಕೇಕ್ ಕತ್ತರಿಸಿದ್ದರು. ಆ ಕೇಕ್ ಮೇಲೆ ‘Bossism ಕಾಲ ಮುಗೀತು, Maximum Mass ಕಾಲ ಶುರುವಾಯ್ತು’ ಎಂದು ಬರೆಯಲಾಗಿತ್ತು. ಕೇಕ್ ಮತ್ತು ಸೆಲೆಬ್ರೇಶನ್ನ ಫೋಟೋ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಆನ್ಲೈನ್ನಲ್ಲಿ ಅಭಿಪ್ರಾಯಗಳು ವ್ಯಕ್ತವಾಗಿದ್ದವು. ಈಗ ಈ ವಿಷಯವಾಗಿ ಮಾತನಾಡಿದ್ದಾರೆ.
”ಯಶ್, ಶಿವಣ್ಣ, ಧ್ರುವ ಸೇರಿದಂತೆ ಬಹುತೇಕ ಕಲಾವಿದರಿಗೆ ಅವರವರ ಫ್ಯಾನ್ಸ್ ಬಾಸ್ ಅಂತಾನೆ ಕರೆಯುತ್ತಾರೆ. ದರ್ಶನ್ ಅವರಿಗೂ ನಂಗೂ ಏನೂ ಇಲ್ಲ.. ಬಹಳ ಕಷ್ಟಪಟ್ಟು ಅವರು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬೆಳೆಯಬೇಕು. ಇವೆಲ್ಲಾ ಸಮಸ್ಯೆಗಳು ಬೇಡ” ಎಂದು ಹೇಳಿದ್ದಾರೆ.
ನಮ್ಮ ಹುಡುಗ ಕಿಚ್ಚ ಬಾಸ್ ಅಂತಾ ಕರೆಯೋದನ್ನು ನಿಲ್ಲಿಸಿ, ಕಿಚ್ಚ ಮಾಸ್ ಅನ್ನೋಣ ಅಂತಾನೆ. ಅದನ್ನೇ ಕೇಕ್ ಮೇಲೆ ಬರೆಸಿಕೊಂಡು ಬರುತ್ತಾನೆ. ಅದನ್ನೇ ಹಿಡಿದು ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ’ ಅಂತಾ ಹೇಳುವುದು ಸರಿಯಲ್ಲ. ಯಾರು ಸುದ್ದಿಯನ್ನು ಶುರು ಮಾಡಿದ್ರೋ ಅವರು ಅವರ ಯಜಮಾನ್ರಿಗೆ ಕರಿಯೋದು ಬಾಸ್ ಅಂತಾನೇ ಅಲ್ವಾ? ಹಾಗಾದ್ರೆ ನಾನ್ ಅವ್ರ ಬಾಸ್ಗೆ ಮಾಡಿಸಿದ್ನಾ ಕೇಕ್? ಎಂದು ಪ್ರಶ್ನಿಸಿದ ಸುದೀಪ್, ನನ್ನ ತಂದೆಗೆ ನಾನು ಬಾಸ್ ಅಂತಾ ಕರೆಯುತ್ತೇನೆ ಎಂದು ಹೇಳಿದ್ದಾರೆ.
ಬಹಳ ವರ್ಷಗಳಿಂದ ನಾವು ಪ್ರಯಾಣ ಮಾಡಿಕೊಂಡು ಇಲ್ಲಿಯವರೆಗೆ ಬಂದಿದ್ದೇವೆ. ನಿಮ್ಮ ಬಗ್ಗೆ ನನಗೆ ಮತ್ತು ನನ್ನ ಬಗ್ಗೆ ನಿಮಗೆ ಗೊತ್ತಿದೆ. ಇಂತಹ ಕ್ಷುಲ್ಲಕ ವಿಷಯಗಳನ್ನು ಅಲ್ಲಲ್ಲೇ ಬಿಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.