ಬೆಂಗಳೂರು: 2024 ರಲ್ಲಿ ಗೂಗಲ್ ನಲ್ಲಿ ಅತಿ ಹೆಚ್ಚು ಹುಡುಕಾಡಿದ ಸುದ್ದಿಯ ಬಗ್ಗೆ ಮಾಹಿತಿ ಹೊರ ಬಿದ್ದಿದ್ದು, ಎರಡು ಪ್ರಕರಣಗಳ ಬಗ್ಗೆ ಜನರು ಹೆಚ್ಚು ಹುಡುಕಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯದ ಜನರು ನಟ ದರ್ಶನ್ ಹಾಗೂ ಹಾಸನ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕುರಿತ ಸುದ್ದಿಗಳನ್ನು ಹೆಚ್ಚು ಹುಡುಕಾಡಿದ್ದಾರೆ ಎಂದು ತಿಳಿದು ಬಂದಿದೆ.
ಮೇನಲ್ಲಿ ನಡೆದಿದ್ದ ಹಾಸನ ಲೈಂಗಿಕ ದೌರ್ಜನ್ಯ ಹಗರಣ ಹಾಗೂ ಅದರ ಪ್ರಮುಖ ಆರೋಪಿ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಬಗ್ಗೆ ಜನರು ಹೆಚ್ಚು ಹುಡುಕಾಡಿದ್ದಾರೆ. ಆನಂತರ ಜೂನ್‌ನಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಬಗ್ಗೆ ಹೆಚ್ಚು ಸರ್ಚ್ ಮಾಡಿದ್ದಾರೆ.
ಹೆಚ್ಚು ಸರ್ಜ್ ಮಾಡಿರುವ ಸುದ್ದಿಗಳು ಯಾವುವು ಎಂದು ನೋಡುವುದಾದರೆ, ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಪ್ರಜ್ವಲ್ ರೇವಣ್ಣ, ಒಲಂಪಿಕ್ಸ್ ಪ್ಯಾರಿಸ್, ಒಲಂಪಿಕ್ಸ್ ಗೇಮ್ಸ್, ಶ್ರೀರಾಮ ಜನ್ಮಭೂಮಿ ಮಂದಿರ್, ಲೋಕಸಭಾ, ಅಡ್ಮಿಷನ್, ದರ್ಶನ್ ಬಗ್ಗೆ ಹೆಚ್ಚು ಸುದ್ದಿಗಳನ್ನು ಸರ್ಚ್ ಮಾಡಿದ್ದಾರೆ..