ಇಸ್ಲಾಮಾಬಾದ್: ಭಾರತ ತಂಡ (Team India) ಪಾಕಿಸ್ತಾನಕ್ಕೆ (Pakistan) ಬರಲಿ, ಬಾರದಿರಲಿ ನಾವೇ ನಾವು ಚಾಂಪಿಯನ್ಸ್ ಟ್ರೋಫಿ (Champions Trophy) ಆಯೋಜಿಸುತ್ತೇವೆ ಎಂದು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (PCB) ಐಸಿಸಿಗೆ ತಿಳಿಸಿದೆ ಎಂದು ವರದಿಯಾಗಿದೆ.
ಭಾರತ ತಂಡವು ಪಾಕ್ ಗೆ ತೆರಳುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ ನಂತರ ಐಸಿಸಿಯು ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಸಲು ಸಾಧ್ಯವೇ ಎಂದು ಐಸಿಸಿ (ICC) ಪಿಸಿಬಿಯನ್ನು ಕೇಳಿತ್ತು. ಆದರೆ, ಪಾಕ್ ನಾವೇ ಟೂರ್ನಿ ಆಯೋಜಿಸುತ್ತೇವೆ ಎಂದಿದೆ.
ದುಬೈಯಲ್ಲಿ (Dubai) ಹೈಬ್ರಿಡ್ ಮಾದರಿಯಲ್ಲಿ ಪಂದ್ಯ ನಡೆಸುವ ಬಗ್ಗೆ ಪ್ರಸ್ತಾಪವಾಗಿತ್ತು. ಈಗ ಈ ಎಲ್ಲಾ ಪ್ರಸ್ತಾಪವನ್ನು ಪಾಕಿಸ್ತಾನ ನಿರಾಕರಿಸಿದೆ. ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಇತ್ತೀಚೆಗೆ ಹೈಬ್ರಿಡ್ ಮಾದರಿಯಲ್ಲಿ ಪಂದ್ಯಾವಳಿಯನ್ನು ಆಯೋಜಿಸುವ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಈಗಾಗಲೇ ಟಿವಿ ರೈಟ್ಸ್ ಮಾರಾಟವಾಗಿರುವ ಕಾರಣ ಭಾರತ ತಂಡ ಒಂದು ವೇಳೆ ಭಾಗವಹಿಸದಿದ್ದರೆ, ಐಸಿಸಿಗೆ ನಷ್ಟವಾಗಲಿದೆ. ಹೀಗಾಗಿ ಅದು ಯಾವ ನಿರ್ಧಾರ ಕೈಗೊಳ್ಳಲಿದೆ ಎಂಬುವುದನ್ನು ಕಾಯ್ದು ನೋಡಬೇಕಿದೆ.