ಹುಬ್ಬಳ್ಳಿ : ರಾಜಭವನವನ್ನು ಲೋಕ ಭವನ ಮಾಡಲು ನಮ್ಮ ಒಪ್ಪಿಗೆ ಇಲ್ಲ ಎಂದು ಕಾನೂನು ಸಚಿವ ಎಚ್.ಕೆ.ಪಾಟೀಲ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ವರದಿಗಾರರೊಂದಿಗೆ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ್ ಹೆಸರು ಬದಲಾವಣೆಗೆ ಸಚಿವ ಸಂಪುಟದ ಒಪ್ಪಿಗೆ ಇಲ್ಲ ಈ ಸಂಬಂಧ ರಾಜ್ಯಪಾಲರ ಬಳಿ ಮಾತನಾಡ್ತೇವೆ. ಮೂಲ ಇದ್ದ ಹೆಸರನ್ನೇ ಉಳಿಸಿಕೊಳ್ಳುವಂತೆ ಹೇಳ್ತೇವೆ.
ಅವರು ರಾಜ್ಯಪಾಲರು ಅವರು ಇರೋ ಭವನ ರಾಜಭವನ ಈಗ ಲೋಕ ಭವನ ಆದ್ರೆ, ರಾಜ್ಯಪಾಲರನ್ನು ಲೋಕಪಾಲರು ಅನ್ನೋಕೆ ಆಗುತ್ತಾ..? ಎಂದಿದ್ದಾರೆ. ಹೀಗಾಗಿ ಹೆಸರು ಬದಲಾವಣೆಗೆ ರಾಜ್ಯ ಸರ್ಕಾರದ ಒಪ್ಪಿಗೆ ಇಲ್ಲ. ಎಲ್ಲಿವರೆಗೆ ರಾಜ್ಯಪಾಲರು ಇರ್ತಾರೋ, ಅಲ್ಲೀವರೆಗೆ ರಾಜಭವನ ಇರುತ್ತೆ ಎಂದು ಆಕ್ರೋಶಿಸಿದ್ದಾರೆ.
ಇದನ್ನೂ ಓದಿ : ರೇಷ್ಮೆ ಮಂಡಳಿಯಲ್ಲಿ 4 ಹುದ್ದೆಗಳ ನೇಮಕಾತಿ: ಸಂದರ್ಶನದ ದಿನಾಂಕ ಇಲ್ಲಿದೆ



















