ಬೆಂಗಳೂರು: ಇಡೀ ಬೆಂಗಳೂರನ್ನು ಒಂದೇ ಮಳೆ ಹಿಂಡಿ ಹಿಪ್ಪೆ ಮಾಡಿದೆ. ಎಲ್ಲೆಂದರಲ್ಲಿ ನೀರೋ ನೀರು ಎನ್ನುವಂತಹ ಸ್ಥಿತಿ ನಿರ್ಮಾಣ ಮಾಡಿದೆ. ಉದ್ಘಾಟನೆಗೆ ಸಜ್ಜಾಗಿ ನಿಂತಿದ್ದ ಮೆಟ್ರೋ ನಿಲ್ದಾಣ ಕೂಡ ಜಲಕಂಟಕ ಎದುರಿಸುವಂತಾಗೆ.
ಸಿಲ್ಕ್ ಬೋರ್ಡ್ ಜಂಕ್ಷನ್ ನಲ್ಲಿರುವ ಕೇಂದ್ರ ರೇಷ್ಮೆ ಮಂಡಳಿ ಮೆಟ್ರೋ ನಿಲ್ದಾಣವನ್ನು ಇತ್ತೀಚೆಗೆ ಸಿದ್ಧಪಡಿಸಲಾಗಿತ್ತು. ಈ ಮೆಟ್ರೋ ಹಳದಿ ಮಾರ್ಗ ಮುಂದಿನ ತಿಂಗಳು ಉದ್ಘಾಟನೆಯಾಗಬೇಕಿತ್ತು. ಆದರೆ, ಒಂದೇ ಮಳೆಗೆ ಮೆಟ್ರೋ ನಿಲ್ದಾಣದಲ್ಲಿ ನೀರೋ ನೀರು ಎನ್ನುವಂತಾಗಿದೆ.
ನಿಲ್ದಾಣ ಬೆಸ್ ಮೆಂಟ್ ನಲ್ಲಿ 10 ಅಡಿಗಳಷ್ಟು ಮಳೆಯ ನೀರು ನಿಂತಿದೆ. ನಿನ್ನೆಯಿಂದಲೂ ಮೆಟ್ರೋ ಸಿಬ್ಬಂದಿ ನೀರು ಹೊರ ಹಾಕಲು ಹರಸಾಹಸ ಪಡುತ್ತಿದ್ದಾರೆ.