ಬೆಳಗಾವಿ : ಧಾರವಾಡ ಕೈಗಾರಿಕಾ ಪ್ರದೇಶಕ್ಕೆ ಹಿಡಕಲ್ ಜಲಾಶಯದ ನೀರು ಪೂರೈಕೆಗೆ ಸಂಬಂಧಿಸಿದಂತೆ ಸಚಿವ ಸತೀಶ್ ಜಾರಕೀಹೊಳಿ ಪ್ರತಿಕ್ರಿಯಿಸಿದ್ದಾರೆ. ಮಾನದಂಡದ ಆಧಾರದ ಮೇಲೆ ನೀರು ಹಂಚಿಕೆ ಮಾಡಬೇಕಾಗುತ್ತದೆ. ಸರ್ಕಾರ ಹೇಳಿದ್ದನ್ನು ನೀರಾವರಿ ಇಲಾಖೆ ಮಾನಿಟರ್ ಮಾಡಬೇಕು. ಮೊದಲನೇ ಪತ್ರದಲ್ಲಿ ನಾವು ನೀರು ಕೊಡುವುದಲ್ಲೆ ಸಾಧ್ಯವಾಗಲ್ಲ ಅಂತ ಬರೆದಿದ್ದರು ಎಂದು ಅವರು ಹೇಳಿದ್ದಾರೆ.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಪರ್ಮಿಷನ್ ಕೊಡದೇ ವರ್ಕ್ ಪ್ರಾರಂಭ ಮಾಡಿದ್ದರು.ಕೆಐಡಿಬಿ ಟೆಂಡರ್ ಆಗಿತ್ತು ಅಂತ ಕೆಲಸ ಪ್ರಾರಂಭ ಮಾಡಿದ್ದರು. ಈಗ ಸರ್ಕಾರ ಅದಕ್ಕೆ ಅನುಮೋದನೆ ನೀಡಿದೆ. ಇದನ್ನು ಇಲ್ಲಿಗೆ ಬಿಟ್ಟು ಬಿಡುವುದು ಒಳ್ಳೆಯದು. ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಕಾಮಗಾರಿಗಳು ಸಂಪೂರ್ಣ ಆದ ನಂತರ ಎಲ್ಲವನ್ನೂ ಉದ್ಘಾಟನೆ ಮಾಡಿಸುತ್ತೆವೆ ಎಂದವರು ಹೇಳಿದ್ದಾರೆ.
ರಾಯಬಾಗದಲ್ಲಿ ಮೂವತ್ತು ಕೆರೆ ತುಂಬಿಸುವ ಯೋಜನೆ ಮುಗಿಯುವ ಹಂತದಲ್ಲಿದೆ. ನಾಳೆಯಿಂದ ಹಿಡಕಲ್ ಡ್ಯಾಂದಿಂದ ಐದು ಸಾವಿರ ಕ್ಯೂಸೇಕ್ ನೀರು ಬಿಡುಗಡೆ ಮಾಡಲಾಗುತ್ತದೆ. ಕೃಷ್ಣಾ ನದಿ ಒಳಹರಿವಿನ ಪ್ರಮಾಣ ಹೆಚ್ಚಾದ ಹಿನ್ನೆಲೆ. ಒಂದೂವರೆ ಲಕ್ಷ ಕ್ಯೂಸೆಕ್ ನೀರು ಬಂದರೆ ಸಮಸ್ಯೆ ಆಗುತ್ತೆ. ಇಲ್ಲವಾದರೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.
ನೀರಾವರಿ ಇಲಾಖೆಯಲ್ಲಿ ಅಧಿಕಾರಿಗಳ ಕೊರತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು ರಾಜ್ಯದ ಎಲ್ಲ ಇಲಾಖೆಗಳಲ್ಲೂ ಹುದ್ದೆ ಖಾಲಿ ಇವೆ. ಆದಷ್ಟು ಬೇಗ ನೇಮಕಾತಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದ್ದಾರೆ.