ಬೆಂಗಳೂರು: ಮಾಜಿ ಡಾನ್ ಮುತ್ತಪ್ಪ ರೈ ಕಿರಿಯ ಪುತ್ರ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಈಗ ರಿಕ್ಕಿ ರೈ ಮೇಲೆ ಮಿಸ್ ಫೈರಿಂಗ್ ನಡಿತಾ? ಎಂಬ ಅನುಮಾನ ವ್ಯಕ್ತವಾಗಿದೆ. ರಿಕ್ಕಿ ರೈ ತೋಟದ ಮನೆ ಸೆಕ್ಯೂರಿಟಿಗಳು ಹಾಗೂ ಅಂಗರಕ್ಷಕರು ಶಾಟ್ ಗನ್ ಬಳಸುತ್ತಾರಂತೆ. ಹೀಗಾಗಿ ರಿಕ್ಕಿ ರೈ ಸೆಕ್ಯೂರಿಟಿ ಅಥವಾ ಅಂಗ ರಕ್ಷಕರಿಂದಲೇ ಮಿಸ್ ಫೈರ್ ಆಗಿರುವ ಶಂಕೆಯನ್ನು ಪೊಲೀಸರು ವ್ಯಕ್ತಪಡಿಸುತ್ತಿದ್ದಾರೆ.
ಪ್ರೊಫೆಷನಲ್ ಶೂಟರ್ ಹತ್ಯೆ ಮಾಡುವುದಕ್ಕೆ ಸ್ಟನ್ ಗನ್ ಅಥವಾ ರಿವಾಲ್ಚಾರ್ ಬಳಕೆ ಮಾಡುತ್ತಿರುತ್ತಾರೆ. ಆದರೆ, ಶಾಟ್ ಗನ್ ನಲ್ಲಿ ರಿಕ್ಕಿ ರೈ ಮೇಲೆ ಫೈರಿಂಗ್ ನಡೆದಿದೆ. ಇದು ಪೊಲೀಸರ ಅನುಮಾನಕ್ಕೆ ಕಾರಣವಾಗಿದೆ. ಶಾಟ್ ಗನ್ ನಲ್ಲಿ ಸೇಪ್ಟಿ ಕಡಿಮೆ ಇರುತ್ತದೆ. ಶಾಟ್ ಗನ್ ನಲ್ಲಿ ಪೈರಿಂಗ್ ರೇಂಜ್ ಕೂಡ ತುಂಬಾ ಕಡಿಮೆ ಇರುತ್ತದೆ. ಶಾಟ್ ಗನ್ ಬುಲೆಟ್ ನಲ್ಲಿ ಸಣ್ಣ ಸಣ್ಣ ಬಾಲ್ಸ್ ಬಳಕೆ ಮಾಡಲಾಗುತ್ತದೆ. ದೂರಕ್ಕೆ ಗುಂಡು ಹೋದಂತೆ ಗುಂಡು ಚದರುತ್ತದೆ. ಹೀಗಾಗಿ ಪ್ರಾಣಕ್ಕೆ ಹಾನಿಯಾಗುವ ಸಾಧ್ಯತೆ ತೀರಾ ಕಡಿಮೆ ಇರುತ್ತದೆ.
ಈ ರೀತಿ ಫೈರಿಂಗ್ ಆಗಿದ್ದಕ್ಕೆ ರಿಕ್ಕಿ ರೈ ಬುಜ ಹಾಗೂ ಮೂಗಿಗೆ ಗಾಯವಾಗಿದೆ. ಇದು ಪ್ರೊಫೆಷನಲ್ ಶೂಟರ್ ಮಾಡಿರುವ ಬದಲು ಸೆಕ್ಯುರಿಟಿ ಮಿಸ್ ಆಗಿ ಫೈರ್ ಮಾಡಿರಬಹುದು ಎನ್ನಲಾಗುತ್ತಿದೆ. ಈಗ ತನಿಖೆಗೆ ಇಳಿದಿರುವ ಪೊಲೀಸರು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.



















