ಭಾರತದಲ್ಲಿ ಅಗತ್ಯಕ್ಕೆ ಅನುಸಾರ ತೈಲ ದಾಸ್ತಾನಿದೆ, ಆತಂಕ ಬೇಡ ಅಂತಾ ಇಂಡಿಯನ್ ಆಯಿಲ್ ಕಾರ್ಪೊರೇಷನ್ ಸ್ಪಷ್ಟಪಡಿಸಿದೆ.
ಗ್ರಾಹಕರು ಗಾಳಿ ಸುದ್ದಿಗಳಿಗೆ ಕಿವಿಗೊಡುವ ಅಗತ್ಯವಿಲ್ಲ. ವಿನಾಕಾರಣ ಪೆಟ್ರೋಲ್, ಡೀಸಲ್, ಎಲ್ ಪಿಜಿ ಸಂಗ್ರಹಣೆ ಗೋಜಿಗೆ ಹೋಗುವುದು ಬೇಡ. ದೇಶದಲ್ಲಿ ಅಗತ್ಯಕ್ಕೆ ಅನುಸಾರ ಅಪಾರ ದಾಸ್ತಾನಿದೆ. ಹೀಗಾಗಿ ಯಾರೊಬ್ಬರು ಸಂಗ್ರಹದ ಆತುರಕ್ಕೆ ಮುಂದಾಗುವುದು ಬೇಡ ಅಂತಾ ಇಂಡಿಯನ್ ಆಯಿಲ್ ಸಂಸ್ಥೆ ಸ್ಪಷ್ಟಪಡಿಸಿದೆ.
ಭಾರತ-ಪಾಕಿಸ್ತಾನ ಯುದ್ಧ ಹಿನ್ನೆಲೆಯಲ್ಲಿ ದೇಶದಲ್ಲಿ ತೈಲಕ್ಕೆ ಬರ ಬರಲಿದೆ ಎನ್ನುವ ಚರ್ಚೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಚರ್ಚೆಯಾಗುತ್ತಿದೆ. ಈ ನಿಟ್ಟಿನಲ್ಲೇ ಸ್ಪಷ್ಟನೆ ನೀಡಿರುವ ಇಂಡಿಯನ್ ಆಯಿಲ್, ದೇಶವಾಸಿಗಳು ಆತಂಕಕ್ಕೆ ಒಳಗಾಗುವುದು ಬೇಡ ಅಂತಾ ಸ್ಪಷ್ಟಪಡಿಸಿದೆ.


















