ಕಾರವಾರ: ಜಿಪಿಎಸ್ ಟ್ರಾನ್ಸ್‌ಮೀಟರ್ ಹಾಗೂ ಟ್ಯಾಗ್ ಹೊಂದಿರುವ ಹಣಹದ್ದು ಒಂದು ಜಿಲ್ಲೆಯಲ್ಲಿ ಹಾರಾಡುತ್ತಿರುವುದು ಪತ್ತೆಯಾಗಿದೆ. ಇದರಿಂದಾಗಿ ಆತಂಕ ಮನೆ ಮಾಡಿದೆ.
ಈ ರಣಹದ್ದು ಕಾರವಾರ ಬಳಿಯ ಕೋಡಿಭಾಗ್‌ನ ನದಿ ಸುತ್ತ ಕಳೆದ 5 ದಿನಗಳಿಂದ ಹಾರಾಟ ನಡೆಸುತ್ತಿದೆ. ಕ್ಯಾಮರಾ ಮೂಲಕ ಜೂಮ್ ಮಾಡಿ ನೋಡಿದಾಗ ಜಿಪಿಎಸ್ ಟ್ರಾನ್ಸ್‌ಮೀಟರ್ ಹೊಂದಿರುವುದು ಬಹಿರಂಗವಾಗಿದೆ. ಇದನ್ನು ಕಂಡು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದು, ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು, ಅರಣ್ಯ ಇಲಾಖೆ, ರಾಜ್ಯ, ಕೇಂದ್ರ ಐಬಿ ಅಧಿಕಾರಿಗಳಿಂದ ಪರಿಶೀಲನೆ ಮಾಡಲಾಗಿದ್ದು, ಬಾಂಬೆ ನ್ಯಾಚುರಲ್ ಹಿಸ್ಟರಿ ಸೊಸೈಟಿ ಸಂಶೋಧನೆ ಉದ್ದೇಶಕ್ಕಾಗಿ ತಾಡೋಬಾ-ಅಂಧೇರಿ ಹುಲಿ ಸಂರಕ್ಷಿತಾರಣ್ಯದಿಂದ ರಣಹದ್ದು ಹಾರಿಸಲಾಗಿತ್ತು ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.