ವಿಜಯಪುರ : ವಿಜಯಪುರದ ಅಂಬೇಡ್ಕರ್ ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭವಾಗಿದ್ದು ಸಚಿವರು ಹಾಗೂ ಅಧಿಕಾರಿಗಳು ಪ್ಲ್ಯಾಗ್ ತೋರಿಸಿ ಓಟಕ್ಕೆ ಚಾಲನೆ ನೀಡಿದ್ದಾರೆ.
ಬೆಳಿಗ್ಗೆ 6 ಗಂಟೆಗೆ 21 ಕಿಲೋ ಮೀಟರ್ ಓಟಕ್ಕೆ ಚಾಲನೆ ನೀಡಿದ್ದು, ದೇಶದ ವಿವಿಧ ಭಾಗಗಳಿಂದ ಆಗಮಿಸಿರುವ 20 ಸಾವಿರಕ್ಕೂ ಹೆಚ್ಚು ಕ್ರೀಡಾಪಟುಗಳು ಭಾಗಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸಚಿವ ಎಂಬಿ ಪಾಟೀಲ್ ಹಾಗೂ ಜಿಲ್ಲೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಹಸಿರೀಕರಣ ಹಾಗೂ ಸ್ಮಾರಕ ರಕ್ಷಣೆಗಾಗಿ ನಡೆಯುವ ಮ್ಯಾರಥಾನ್ ಇದಾಗಿದ್ದು, ಈ ಹಿಂದೆ ಮ್ಯಾರಥಾನ್ ನಡೆದಾಗ ನಟ ಯಶ್, ರಾಹುಲ್ ಗಾಂಧಿ ಸೇರಿದಂತೆ ಗಣ್ಯರು ಬಾಗಿಯಾಗಿದ್ದರು.
ಇದನ್ನೂ ಓದಿ : ಬ್ಯಾಟಿಂಗ್ ಸಂಪೂರ್ಣ ತೃಪ್ತಿ ತಂದಿದೆ : ಸರಣಿ ಶ್ರೇಷ್ಠ ಪ್ರಶಸ್ತಿ ಗೆದ್ದು ಬೀಗಿದ ವಿರಾಟ್ ಕೊಹ್ಲಿ



















