ಆಂಧ್ರ ಲೋಕಸಭೆ ಹಾಗೂ ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆದಿದ್ದು, ಇಂದು ಫಲಿತಾಂಶ ಹೊರ ಬೀಳುತ್ತಿದೆ. 175 ವಿಧಾನಸಭಾ ಸ್ಥಾನಗಳ ಪೈಕಿ (Andhra Pradesh Assembly Election Results) 30 ಸ್ಥಾನಗಳಲ್ಲಿ ತೆಲುಗು ದೇಶಂ ಪಕ್ಷ ಟಿಡಿಪಿ ಅಲ್ಪ ಮುನ್ನಡೆ ಸಾಧಿಸಿದೆ. ವೈಎಸ್‌ಆರ್‌ಸಿಪಿ ಮೂರರಲ್ಲಿ ಮುನ್ನಡೆ ಕಾಯ್ದುಕೊಂಡಿದೆ.
ಲೋಕಸಭೆ ಫಲಿತಾಂಶದಲ್ಲಿ ಟಿಡಿಪಿ ನಾಲ್ಕು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ವೈಎಸ್‌ಆರ್‌ಸಿಪಿ ಎರಡು ಮತ್ತು ಬಿಜೆಪಿ ಎರಡು ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಂಡಿದೆ. ಆಡಳಿತಾರೂಢ YSRCP ಪಕ್ಷ, ಕಾಂಗ್ರೆಸ್ ನೇತೃತ್ವದ ಭಾರತ ಒಕ್ಕೂಟ ಮತ್ತು ಬಿಜೆಪಿ ನೇತೃತ್ವದ NDA ಮೈತ್ರಿಕೂಟದ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಸದ್ಯದ ಮಾಹಿತಿಯಂತೆ ಚಂದ್ರಬಾಬು ನಾಯ್ಡು ಅವರ TDP ಮತ್ತು ಪವನ್ ಕಲ್ಯಾಣ್ ನೇತೃತ್ವದ ಜನ ಸೇನಾ ಪಕ್ಷ (ಜೆಎಸ್ಪಿ) ಹಾಗೂ ಬಿಜೆಪಿ ಮೈತ್ರಿ ಮುನ್ನಡೆ ಕಾಯ್ದುಕೊಂಡಿದೆ.
ಪೀಠಾಪುರಂ ಅಸೆಂಬ್ಲಿ ಕ್ಷೇತ್ರದಲ್ಲಿ ಜನ ಸೇನಾ ಪಕ್ಷ (ಜೆಎಸ್ಪಿ) ನಾಯಕ, ನಟ ಪವನ್ ಕಲ್ಯಾಣ್ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ.