ಬೆಂಗಳೂರು | ಭರ್ಜರಿ ಕಾರ್ಯಾಚರಣೆ ನಡೆಸಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ವಿವೇಕನಗರ ಪೊಲೀಸರು ಬಂಧಿಸಿದ್ದಾರೆ. ಸಂಜಿತ್ ಬಾಗ್(35) ಮಿಥುನ್ ಕುಮಾರ್ (25) ಬಂಧಿತ ಆರೋಪಿಗಳು.
ಒಡಿಸ್ಸಾದಿಂದ ಬರುತ್ತಿದ್ದ ಗಾಂಜಾವನ್ನ ರಸ್ತೆಯಲ್ಲಿ ನಿಂತು ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಗಳು, ವಾಟ್ಸ್ಆ್ಯಪ್ ಮೂಲಕವೂ ಡ್ರಗ್ ಡಿಲೀಂಗ್‌ನಲ್ಲಿ ತೊಡಗಿದ್ದರು.
ರಾಜಸ್ಥಾನದ ಪ್ರಮುಖ ಆರೋಪಿ ರಾಕೇಶ್ ಎಂಬಾತ ಈ ಇಬ್ಬರು ಆರೋಪಿಗಳನ್ನು ಸಂಪರ್ಕಿಸಿ ಡ್ರಗ್ ಡೀಲ್ ಮಾಡುವಂತೆ ಸೂಚಿಸುತ್ತಿದ್ದ ಎನ್ನಲಾಗಿದೆ. ವಾಟ್ಸ್ಆ್ಯಪ್ ಮೂಲಕವೇ ಇಬ್ಬರನ್ನು ಅಪರೇಟ್ ಮಾಡುತ್ತಿದ್ದ ಆರೋಪಿ ರಾಕೇಶ್‌ನನ್ನು ಬಂಧಿಸಲು ಹೋಗಿದ್ದ ಪೊಲೀಸರಿಗೆ ಸಂಜಿತ್ ಬಾಗ್ ಮತ್ತು ಮಿಥುನ್ ಕುಂಭಾರ್ ಸೆರೆ ಸಿಕ್ಕಿದ್ದಾರೆ.
ಬಂಧಿತರಿಂದ 21 ಲಕ್ಷ ಮೌಲ್ಯದ 21 ಕೆಜಿ ಗಾಂಜಾ ಸೀಜ್ ಮಾಡಲಾಗಿದ್ದು, ಸದ್ಯ ಪ್ರಮುಖ ಆರೋಪಿಗಳಾದ ರಾಕೇಶ್, ಸುಕ್ರ ವರ್ಮಾ ಎಂಬುವವರಿಗಾಗಿ ವಿವೇಕನಗರ ಪೊಲೀಸರು ಬಲೆ ಬೀಸಿದ್ದಾರೆ.
ಇದನ್ನೂ ಓದಿ : ಥೈಲ್ಯಾಂಡ್‌ನಲ್ಲಿ ಭೀಕರ ರೈಲು ದುರಂತ : ಚಲಿಸುತ್ತಿದ್ದ ರೈಲಿನ ಮೇಲೆ ಕುಸಿದ ಕ್ರೇನ್‌ಗೆ 22 ಬಲಿ


















