ಭಾರತ ಜಗತ್ತಿನ ಅತಿದೊಡ್ಡ ಜನತಂತ್ರ.. ಐದನೇ ದೊಡ್ಡ ಆರ್ಥಿಕ ಶಕ್ತಿ. ಚಂದ್ರಯಾನದಿಂದ ಚಂದ್ರನ ಮೇಲೆ ಹೆಜ್ಜೆ ಇಟ್ಟ ದೇಶ. ಚಂದ್ರಯಾನದಿಂದ ಚಂದ್ರನ ಮೇಲೆ ಹೆಜ್ಜೆ ಇಟ್ಟ ದೇಶ.. ಆದರೆ ಇದೇ ಭಾರತದ ನಾಗರಿಕರು ವಿದೇಶಕ್ಕೆ ಪ್ರಯಾಣಿಸ ಬೇಕಾದಾಗ ಪಾಸ್‌ಪೋರ್ಟ್ ಅಡ್ಡಿ ಎದುರಾಗುತ್ತದೆ.
ಭಾರತೀಯ ಪಾಸ್‌ಪೋರ್ಟ್ ಜಾಗತಿಕ ಮಟ್ಟದಲ್ಲಿ ಇನ್ನೂ ದುರ್ಬಲವಾಗಿಯೇ ಉಳಿದಿದೆ. ಹೆನ್ಲಿ ಪಾಸ್ ಪೋರ್ಟ್‌ನ ಪ್ರಕಾರ, ಭಾರತ ಈಗ 85ನೇ ಸ್ಥಾನದಲ್ಲಿದೆ. ಅಂದರೆ ಜಗತ್ತಿನ ಬಹುತೇಕ ದೇಶಗಳ ನಾಗರಿಕರಿಗೆ ಸಿಗುವಷ್ಟು ಸ್ವತಂತ್ರ ಪ್ರಯಾಣ, ಭಾರತೀಯರಿಗೆ ಇಲ್ಲ ಎಂಬುದನ್ನ ಇದು ಸೂಚಿಸುತ್ತದೆ.. ಇಂದು ಭಾರತೀಯ ಪಾಸ್‌ಪೋರ್ಟ್ ಹೊಂದಿರುವವರಿಗೆ ಕೇವಲ 57 ದೇಶಗಳಿಗೆ ಮಾತ್ರ ವಿಸಾ-ರಹಿತ ಪ್ರವೇಶವಿದೆ.. ಉಳಿದ ಬಹುತೇಕ ರಾಷ್ಟ್ರಗಳಿಗೆ ಮೊದಲೇ ವಿಸಾ ಪಡೆದುಕೊಳ್ಳಲೇಬೇಕಾದ ಅನಿವಾರ್ಯತೆ ಇದೆ. ಭಾರತ ಆರ್ಥಿಕತೆಯಲ್ಲಿ ವೇಗವಾಗಿ ಬೆಳೆಯುತ್ತಿದ್ದರೂ ಪಾಸ್‌ಪೋರ್ಟ್ ಶಕ್ತಿಯಲ್ಲಿ ಅನೇಕ ಏಷ್ಯನ್ ಮತ್ತು ಆಫ್ರಿಕನ್ ರಾಷ್ಟ್ರಗಳಿಗಿಂತಲೂ ಬಹಳ ಹಿಂದುಳಿದಿದೆ..
ಭಾರತೀಯ ಪಾಸ್‌ಪೋರ್ಟ್ ದುರ್ಬಲವಾಗಿರುವುದಕ್ಕೆ ಆರ್ಥಿಕ ಶಕ್ತಿ ಮಾತ್ರ ಕಾರಣವಲ್ಲ. ಪಾಸ್‌ಪೋರ್ಟ್ ಶಕ್ತಿಯನ್ನು ನಿರ್ಧರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸುವುದು ರಾಜತಾಂತ್ರಿಕ ಸಂಬಂಧಗಳು ಮತ್ತು ವಿಸಾ ಒಪ್ಪಂದಗಳು.. ಯಾವ ದೇಶದೊಂದಿಗೆ ವಿಸಾ-ರಹಿತ ಅಥವಾ ಸರಳ ವಿಸಾ ವ್ಯವಸ್ಥೆ ಇದೆ. ಆ ದೇಶಗಳ ನಾಗರಿಕರಿಗೆ ಅಂತಾರಾಷ್ಟ್ರೀಯ ಪ್ರಯಾಣ ಸುಲಭವಾಗುತ್ತದೆ. ಆದರೆ ಭಾರತ ಇನ್ನೂ ಅನೇಕ ರಾಷ್ಟ್ರಗಳೊಂದಿಗೆ ಇಂತಹ ಒಪ್ಪಂದವನ್ನ ಸಾಧಿಸಲು ಸಾಧ್ಯವಾಗಿಲ್ಲ.
ಮತ್ತೊಂದು ಪ್ರಮುಖ ಅಂಶವೆಂದರೇ ಭದ್ರತಾ ನಂಬಿಕೆ. ಕೆಲವು ರಾಷ್ಟ್ರಗಳು ಭಾರತದಿಂದ ಹೋಗುವ ಪ್ರಯಾಣಿಕರ ಬಗ್ಗೆ ಹೆಚ್ಚುವರಿ ಪರಿಶೀಲನೆ ಅಗತ್ಯ ಎಂತ ಹೇಳುತ್ತಿದೆ. ಇದರಿಂದ ವೀಸಾ ಪ್ರಕ್ರಿಯೆಗೆ ದೀರ್ಘ ಸಮಯ ತೆಗೆದುಕೊಳ್ಳುತ್ತಿದೆ.. ಭಾರತದ ವಿದೇಶಾಂಗ ನೀತಿಯೂ ಹಿಂದಿನ ವರ್ಷದಲ್ಲಿ ಬಲಪಡಿಸಿದ್ದರೂ . ಪಾಸ್‌ಪೋರ್ಟ್ ಶಕ್ತಿಯಲ್ಲಿ ಅದರ ಪರಿಣಾಮ ಇನ್ನೂ ಸಂಪೂರ್ಣವಾಗಿ ಕಾಣಿಸಿಕೊಳ್ಳಿಲ್ಲ. ಹಾಗಾಂತ ಇದು ಸರಿಯಾಗುವುದೇ ಇಲ್ಲ ಎಂದೂ ಹೇಳಲೂ ಸಾಧ್ಯವಿಲ್ಲ. ರಾಜತಾಂತ್ರಿಕ ಬಲ ಹೆಚ್ಚಿದಂತೆ. ಪಾಸ್‌ಪೋರ್ಟ್ ಮೌಲ್ಯವೂ ಮುಂದಿನ ದಿನಗಳಲ್ಲಿ ಹೆಚ್ಚುವ ನಿರೀಕ್ಷೆ ಇದೆ
ಭಾರತೀಯ ಪಾಸ್‌ಪೋರ್ಟ್ ದುರ್ಬಲವಾಗಿರುವುದಕ್ಕೆ ಮತ್ತೊಂದು ಕಾರಣ, ಅಕ್ರಮ ವಲಸೆ ಮತ್ತು ವಿಸಾ ದುರುಪಯೋಗದ ಬಗ್ಗೆ ಇರುವ ಭೀತಿ. ಕೆಲವು ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ಭಾರತದಿಂದ ಹೋಗುವ ಪ್ರಯಾಣಿಕರು ವೀಸಾದಲ್ಲಿ ತೆರಳಿ ಅಲ್ಲಿಯೇ ಉಳಿಯುವ ಸಾಧ್ಯತೆ ಇದೆ. ಈ ನಂಬಿಕೆಯ ಕೊರತೆಯೇ ಭಾರತೀಯರಿಗೆ ಕಠಿಣ ವೀಸಾ ನಿಯಮಗಳಿಗೆ ಕಾರಣವಾಗಿದೆ. ಹಾಗಾಗಿ ವಿಸಾ-ರಹಿತ ಪ್ರವೇಶ ನೀಡಲು ಇತರೆ ದೇಶಗಳು ಹಿಂದು-ಮುಂದು ನೋಡುತ್ತಿದೆ.
ಜಗತ್ತಿನ ಅತ್ಯಂತ ಶಕ್ತಿಶಾಲಿ ಪಾಸ್‌ಪೋರ್ಟ್‌ಗಳ ಪಟ್ಟಿಯಲ್ಲಿ ಜಪಾನ್, ಸಿಂಗಾಪುರ, ದಕ್ಷಿಣ ಕೊರಿಯಾ ಮತ್ತು ಯುರೋಪಿನ ಹಲವು ರಾಷ್ಟ್ರಗಳು ಮೇಲಿನ ಸ್ಥಾನಗಳಲ್ಲಿಇವೆ. ಈ ದೇಶಗಳ ನಾಗರಿಕರು170 ರಿಂದ 190ಕ್ಕೂ ಹೆಚ್ಚು ದೇಶಗಳಿಗೆ ವಿಸಾ-ರಹಿತವಾಗಿ ಸಂಚರಿಸಬಹುದಾಗಿದೆ.. ಇದು ಅವರ ಬಲವಾದ ವಿಶ್ವಾಸಾರ್ಹ ವಲಸೆ ನೀತಿ ಮತ್ತು ಅಂತಾರಾಷ್ಟ್ರೀಯ ನಂಬಿಕೆಯ ಫಲಿತಾಂಶವಾಗಿದೆ.
ಇದಕ್ಕೆ ವಿರುದ್ಧವಾಗಿ, ಭಾರತೀಯ ಪಾಸ್‌ಪೊರ್ಟ್ ಕೇವಲ 57 ದೇಶಗಳಿಗೆ ಮಾತ್ರ ವಿಸಾ-ರಹಿತ ಪ್ರವೇಶ ನೀಡುತ್ತದೆ. ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಜಗತ್ತಿನಲ್ಲಿ ಪ್ರಭಾವ ಹೊಂದಿರುವ ದೇಶವಾಗಿದ್ದರೂ, ವೀಸಾದಲ್ಲಿ ಭಾರತ ಇನ್ನೂ ಹಿನ್ನಡೆಯಲ್ಲಿದೆ. ಚಿಕ್ಕ ದೇಶಗಳಾದರೂ ಬಲವಾದ ವೀಸಾ ಒಪ್ಪಂದಗಳನ್ನು ಮಾಡಿಕೊಂಡಿರುವ ರಾಷ್ಟ್ರಗಳು ಭಾರತಕ್ಕಿಂತ ಮುಂದೆ ಇದೆ. ಪಾಸ್‌ಪೊರ್ಟ್ ಶಕ್ತಿ ಆರ್ಥಿಕತೆ ಮಾತ್ರದಿಂದಲ್ಲ ರಾಜತಾಂತ್ರಿಕ ಸಮನ್ವಯದಿಂದ ನಿರ್ಧಾರವಾಗುತ್ತದೆ ಎಂಬುದನ್ನು ತೋರಿಸುತ್ತದೆ.
ಭಾರತೀಯ ಪಾಸ್‌ಪೊರ್ಟ್ ಶಕ್ತಿಯನ್ನು ಹೆಚ್ಚಿಸಲು ಇದೀಗ ಸಮಯ ಬಂದಿದೆ. ಜಗತ್ತಿನೊಂದಿಗೆ ಬಲವಾದ ಸಂಪರ್ಕ ಹೊಂದಲು ಭಾರತ ಕೇವಲ ಆರ್ಥಿಕ ಶಕ್ತಿಯಲ್ಲ, ರಾಜತಾಂತ್ರಿಕ ವಿಶ್ವಾಸಗಳಿಸುವ ಅಗತ್ಯವಿದೆ. ಹೆಚ್ಚು ದೇಶಗಳೊಂದಿಗೆ ವೀಸಾ-ರಹಿತ ಒಪ್ಪಂದಗಳನ್ನು ಸಾಧಿಸುವುದು ಮೊದಲ ಆದ್ಯತೆಯಾಗಬೇಕು. ಅದರೊಂದಿಗೆ ವಲಸೆ ನಿಯಮ ಉಲ್ಲಂಘನೆಗೆ ಕಠಿಣ ಕ್ರಮ ಕೈಗೊಂಡರೆ, ಭಾರತೀಯರ ಮೇಲಿನ ನಂಬಿಕೆ ಹೆಚ್ಚಲಿದೆ. ವಿದ್ಯಾರ್ಥಿ ಮತ್ತು ಪ್ರವಾಸಿ ವೀಸಾಗಳ ದುರುಪಯೋಗ ತಡೆಯಲು ಕಟ್ಟುನಿಟ್ಟಿನ ಪರಿಶೀಲನೆ ಜಾರಿಗೊಳಿಸಿದರೆ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಪಾಸ್‌ಪೊರ್ಟ್ ಮೌಲ್ಯವೂ ಏರಿಕೆಯಾಗಲಿದೆ.
ಜಗತ್ತಿನಲ್ಲಿ ಭಾರತದ ಹೆಸರು ದಿನೇ ದಿನೇ ದೊಡ್ಡದಾಗುತ್ತಿದೆ. ಆರ್ಥಿಕ ಶಕ್ತಿ, ತಂತ್ರಜ್ಞಾನ ಸಾಧನೆ, ಅಂತರಿಕ್ಷ ಯಶಸ್ಸು ಎಲ್ಲ ಕ್ಷೇತ್ರಗಳಲ್ಲೂ ಭಾರತ ಮುನ್ನಡೆಯಲ್ಲಿದೆ. ಆದರೆ ಭಾರತೀಯ ನಾಗರಿಕರ ಕೈಯಲ್ಲಿರುವ ಪಾಸ್‌ಪೊರ್ಟ್ ಮಾತ್ರ ಇನ್ನೂ ಅಂತರರಾಷ್ಟ್ರೀಯ ನಂಬಿಕೆಯ ಪರೀಕ್ಷೆಯಲ್ಲೇ ಇದೆ. ವಿದೇಶ ಪ್ರವಾಸ, ಶಿಕ್ಷಣ, ಉದ್ಯೋಗ ಎಲ್ಲಕ್ಕೂ ವಿಸಾ ಅಡ್ಡಿಯೇ ದೊಡ್ಡ ತಡೆ. ಬಲವಾದ ದೇಶಕ್ಕೆ ಬಲವಾದ ಪಾಸ್‌ಪೊರ್ಟ್ ಅಗತ್ಯ. ಮುಂದಿನ ದಿನಗಳಲ್ಲಿ ಭಾರತದ ವಿದೇಶಾಂಗ ನೀತಿ ಮತ್ತು ವಲಸೆ ಶಿಸ್ತು ಪ್ಯಾಸ್ಪೋರ್ಟ್ ಶಕ್ತಿಯನ್ನು ಎಷ್ಟು ಬದಲಾಯಿಸಲಿದೆ ಎಂಬುದೇ ಎಲ್ಲರ ಕುತೂಹಲ.
ಇದನ್ನೂ ಓದಿ : ಭಾರತ-ಪಾಕ್ ಕದನವಿರಾಮ ಸಂಧಾನ | ಟ್ರಂಪ್ ಆಪ್ತ ರಿಕಿ ಗಿಲ್‌ಗೆ ಅಮೆರಿಕದ ಗೌರವ ; ಹೊಸ ರಾಜತಾಂತ್ರಿಕ ಸಂಘರ್ಷಕ್ಕೆ ನಾಂದಿ?



















