ಬಾಗಲಕೋಟೆ: ಬೆಳಗಾವಿಯಲ್ಲಿ ಕನ್ನಡ ಮಾತನಾಡಿಲ್ಲ ಎಂಬ ಕಾರಣಕ್ಕೆ ನಿರ್ವಾಹಕರೊಬ್ಬರ ಮೇಲೆ ಹಲ್ಲೆ ನಡೆಸಿರುವ ಘಟನೆಯ ವಿರುದ್ಧ ರಾಜ್ಯದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಈಗ ವಿಧಾನ ಪರಿಷತ್ ಸದಸ್ಯೆ, ಮಾಜಿ ಸಚಿವೆ ಹಾಗೂ ಹಿರಿಯ ನಟಿ ಉಮಾಶ್ರೀ ಘಟನೆಯನ್ನು ಖಂಡಿಸಿದ್ದಾರೆ ಎಂದು ತಿಳಿದು ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಉಮಾಶ್ರೀ ಖಂಡಿಸಿರುವ ಪೋಸ್ಟರ್ ಹರಿದಾಡುತ್ತಿದೆ.
ಪೋಸ್ಟರ್ ನಲ್ಲಿ ಕೂಡ ಕನ್ನಡ ನಾಡಿನ ನೆಲದ ಬಗ್ಗೆ ಭಾಷೆಯ ಬಗ್ಗೆ ಗೌರವ ಇಲ್ಲದವರು ನಮ್ಮ ನೆಲದಲ್ಲೇಕೆ ಬಾಳುತಿದ್ದೀರಿ? ಎಂದು ಪ್ರಶ್ನಿಸಿದ್ದಾರೆ. ಕನ್ನಡ ನಾಡಿನಲ್ಲಿ ಮರಾಠಿಗರ ದೌರ್ಜನ್ಯ ಖಂಡನೀಯ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನೆಡೆಸಿರುವವರನ್ನು ಈ ಕೂಡಲೇ ದಂಡಿಸಬೇಕು ಎಂದು ಮನವಿ ಮಾಡಲಾಗಿದೆ.
ಕನ್ನಡ ನಾಡಿನ ನೆಲದ ಬಗ್ಗೆ ಭಾಷೆಯ ಬಗ್ಗೆ ಗೌರವ ಇಲ್ಲದವರು ನಮ್ಮ ನೆಲದಲ್ಲೇಕೆ ಬಾಳುತಿದ್ದೀರಿ? ತೊಲಗಿ ಇಲ್ಲಿಂದ ಕನ್ನಡ ನಮ್ಮ ಉಸಿರು ಕನ್ನಡವೇ ಸತ್ಯ ಕನ್ನಡವೇ ನಿತ್ಯ ಜೈ ಕನ್ನಡಾಂಬೆ.. ಕನ್ನಡದಲ್ಲಿ ಮಾತನಾಡಿ ಎಂದು ತಿಳಿಸಲು ಧೈರ್ಯ ತೋರಿದ ನಿಜ ಕನ್ನಡಿಗನಿಗೇ ನನ್ನ ಬೆಂಬಲ ಜೈ ಕನ್ನಡಾಂಬೆ ಎಂಬ ಪೋಸ್ಟ್ ವೈರಲ್ ಆಗಿದೆ.