ಚಿತ್ರದುರ್ಗದ ರೇಣುಕಾಸ್ವಾಮಿ ಮರ್ಡರ್ ಕೇಸ್ ನಲ್ಲಿ ನಟ ದರ್ಶನ್ ಪರಪ್ಪನ ಅಗ್ರಹಾರದಲ್ಲಿ ಮುದ್ದೆ ಮುರಿಯುತ್ತಿದ್ದಾರೆ. ಪತಿಯನ್ನು ಕೇಸ್ ನಿಂದ ಹೇಗಾದರೂ ಮಾಡಿ ಪಾರು ಮಾಡಬೇಕೆಂದು ಪಣತೊಟ್ಟಿರುವ ಪತ್ನಿ ವಿಜಯಲಕ್ಷ್ಮೀ ಕೊಲ್ಲೂರು ಮುಕಾಂಬಿಕೆಯ ದರ್ಶನ ಪಡೆದಿದ್ದಾರೆ.
ಮಳೆಯ ಮಧ್ಯೆಯೇ ವಿಜಯಲಕ್ಷ್ಮೀ ಅವರು ಗುರುವಾರ ಕೊಲ್ಲೂರಿಗೆ ತೆರಳಿದ್ದಾರೆ. ಅಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಚಿಂಡಿಕಾ ಹೋಮದಲ್ಲಿ ಕೂಡ ಬೆಳ್ಳಂಬೆಳಗ್ಗೆ ಭಾಗವಹಿಸಿದ್ದಾರೆ. ಈ ಮೂಲಕ ಪತಿಯ ಬಿಡುಗಡೆಗೆ ದೇವರಲ್ಲಿ ಪ್ರಾರ್ಥಿಸಿದ್ದಾರೆ.
ದರ್ಶನ್ ಅರೆಸ್ಟ್ ಆದ ನಂತರ ವಿಜಯಲಕ್ಷ್ಮೀ ಅವರು ಇನ್ಸ್ಟಾಗ್ರಾಮ್ನ ಡಿ ಆ್ಯಕ್ಟೀವ್ ಮಾಡಿದ್ದರು. ನಂತರ ಮತ್ತೆ ಪತಿಯ ಬಳಿ ತೆರಳಿ ಮಾತುಕತೆ ನಡೆಸಿ, ಪತಿಯನ್ನು ಕಷ್ಟದಿಂದ ಪಾರು ಮಾಡಲು ಟೊಂಕಕಟ್ಟಿ ನಿಂತಿದ್ದಾರೆ.
ವಾರಕ್ಕೆ ಒಮ್ಮೆಯಾದರೂ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿ ಮಾಡುತ್ತಾರೆ. ಜೈಲಿಗೆ ತೆರಳಿ ಪತಿಗೆ ಧೈರ್ಯ ತುಂಬಿ ಬರುತ್ತಿದ್ದಾರೆ. ಹೀಗಾಗಿಲ ದರ್ಶನ್ ಸ್ವಲ್ಪ ನಿರಾಳರಾಗಿದ್ದಾರೆ.