ಮಂಗಳೂರು : ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದ ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಜ್ಪೆ ಠಾಣೆಯ ಪೊಲೀಸರು ಓರ್ವ ಅಪ್ರಾಪ್ತ ವಯಸ್ಕನ ಸಹಿತ 8 ಮಂದಿಯನ್ನು ಬಂಧನಗೊಳಿಸಿದ್ದಾರೆ.
ಕಾರ್ತಿಕ್, ರಾಕೇಶ್ ಸಲ್ಮಾನಾ, ಜೀವನ್, ಸಂದೀಪ್, ರಕ್ಷಿತ್, ಶ್ರವಣ್, ಸುರೇಶ್ ಬಂಧಿತ ಆರೋಪಿಗಳು. ಬಾಲಕನನ್ನು ಬಾಲಾಪರಾಧ ಗೃಹಕ್ಕೆ ಸೇರಿಸಲಾಗಿದೆ. 2 ತಿಂಗಳ ಹಿಂದೆ ನಡೆದ ಘಟನೆ ಇದಾಗಿದೆ.
ಕಾರ್ತಿಕ್‌ಗೆ ಇನ್ ಸ್ಟಾಗ್ರಾಂನಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿನಿಯೊಬ್ಬಳ ಪರಿಚಯವಾಗಿದ್ದು, ಪ್ರೀತಿಗೆ ತಿರುಗಿದೆ. ಜೂನ್‌ನಲ್ಲಿ ವಿದ್ಯಾರ್ಥಿನಿಯನ್ನು ಪುಸಲಾಯಿಸಿ ಅಡ್ಯಾರ್ ಫಾಲ್ಸ್ ಸಮೀಪ ಇರುವ ಕಾಡಿಗೆ ಕರೆದೊಯ್ದಿದ್ದು ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪ ಹೊರಿಸಲಾಗಿದೆ.
ಸ್ಥಳದಲ್ಲಿ ಆಕೆಯ ಸ್ನೇಹಿತ ರಾಕೇಶ್ ಸಲ್ದಾನ್ಹಾ ಎನ್ನುವಾತನೂ ಇದ್ದು, ಆತನೂ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದ. ಇದನ್ನು ಕಾರ್ತಿಕ್ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದ, ಅದನ್ನು ಸ್ನೇಹಿತರು ನೋಡಿದ್ದು, ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಈ ವಿಚಾರ ತಿಳಿಯುತ್ತಲೇ ಆ. 16ರಂದು ಸಂತ್ರಸ್ತ ಮಹಿಳೆ ಬಜ್ಪೆ ಠಾಣೆಗೆ ದೂರು ನೀಡಿದ್ದಳು. ಪೊಲೀಸರು ಪೋಕೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.