ಬೆಂಗಳೂರು: ವಾಲ್ಮೀಕಿ ನಿಗಮದ ಹಗರಣದ ಬಳಿಕ ಮೊತ್ತೊಂದು ನಿಗಮದ ಬ್ರಹ್ಮಾಂಡ ಭ್ರಷ್ಟಾಚಾರ ಈಗ ಬಟಾಬಯಲಾಗಿದೆ.
ಭೂ ಒಡೆತನ ಯೋಜನೆಯಡಿ ಭೂಮಿ ಮಂಜೂರಾದ ಫಲಾನುಭವಿಗಳಿಗೆ ನೀಡುವ ಸಹಾಯಧನದಲ್ಲಿ ಕೋಟ್ಯಾಂತರ ರೂ. ಅಕ್ರಮ ನಡೆದಿದೆ ಎಂದು ತಿಳಿದು ಬಂದಿದೆ.
ಭೋವಿ ಅಭಿವೃದ್ಧಿ ನಿಗಮದ ಕಛೇರಿಯಲ್ಲೇ ಕಮಿಷನ್ ದಂಧೆ ನಡೆಯುತ್ತಿದ್ದು, ಫಲಾನುಭವಿಯೊಬ್ಬರ ಬಳಿ ನಿಗಮದ ಅಧ್ಯಕ್ಷ ರವಿಕುಮಾರ್ ಕಮಿಷನ್ ಕೇಳುವ ವಿಡಿಯೋ ಲಭ್ಯವಾಗಿದೆ.
“25 ಲಕ್ಷ ಹಣ ಬಿಡುಗಡೆ ಮಾಡುತ್ತೇನೆ 5ಲಕ್ಷ ಕೊಡಿ. ಶೇ.10ರಷ್ಟು ಕಮಿಷನ್ ನಡೆಯುತ್ತಿದ್ದು, ಶೇ 5.6 ರಷ್ಟು ಕೊಡಿ” ಎಂದು ಫಲಾನುಭವಿಗೆ ನೇರವಾಗಿ ಪರ್ಸಂಟೇಜ್ ಲೆಕ್ಕಚಾರದಲ್ಲಿ ಲಂಚ ನೀಡುವಂತೆ ಬೇಡಿಕೆ ಇಟ್ಟಿರುವ ವಿಡಿಯೋವೊಂದು ಕರ್ನಾಟಕ ನ್ಯೂಸ್ ಬೀಟ್ ಗೆ ಲಭ್ಯವಾಗಿದೆ.



















