ಮುಂಬೈ : ದಕ್ಷಿಣ ಆಫ್ರಿಕಾ ವಿರುದ್ಧದ ಐದನೇ ಟಿ20ಐ ಪಂದ್ಯದಲ್ಲಿ ವರುಣ್ ಚಕ್ರವರ್ತಿ ಹೊಸ ದಾಖಲೆ ಬರೆದಿದ್ದಾರೆ. ಕಳೆದ ಎರಡು ಸರಣಿಗಳಲ್ಲಿ ತನ್ನದೇ ದಾಖಲೆ ಮುರಿದು ಮತ್ತೊಂದು ಸಾಧನೆ ಮಾಡಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ನಾಲ್ಕು ಟಿ20 ಪಂದ್ಯಗಳ ದ್ವಿಪಕ್ಷೀಯ ಸರಣಿಯಲ್ಲಿ ಅಮೋಘ ಬೌಲಿಂಗ್ ಮಾಡಿ ದಾಖಲೆ ನಿರ್ಮಿಸಿದ್ದ ವರುಣ್ ಚಕ್ರವರ್ತಿ, (Varun Chakravarthy) ಈಗ ತವರಿನಲ್ಲಿ ಇಂಗ್ಲೆಂಡ್ ವಿರುದ್ಧದ ಸರಣಿಯಲ್ಲಿ ತನ್ನದೇ ದಾಖಲೆ ಮುರಿದಿದ್ದಾರೆ.
ಇಂಗ್ಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20ಐ ಪಂದ್ಯದಲ್ಲೂ ಕೈಚಳಕ ಮುಂದುವರಿಸಿದ್ದ ವರುಣ್, ಎಸೆದ 2 ಓವರ್ಗಳ ಬೌಲಿಂಗ್ನಲ್ಲಿ 25 ರನ್ ನೀಡಿ 2 ವಿಕೆಟ್ ಕಿತ್ತರು. ಒಟ್ಟಾರೆ ಸರಣಿಯಲ್ಲಿ 14 ವಿಕೆಟ್ ಉರುಳಿಸಿ, ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಅಂತಿಮ ಟಿ20ಐ ಪಂದ್ಯದಲ್ಲಿ ವರುಣ್ ಇಂಗ್ಲೆಂಡ್ (England) ನಾಯಕ ಜೋಸ್ ಬಟ್ಲರ್(Jose Butler) ಅವರನ್ನು ಔಟ್ ಮಾಡುವ ಮೂಲಕ ವೈಯಕ್ತಿಕ ದಾಖಲೆ ನಿರ್ಮಿಸಿದ್ದಾರೆ. ಈ ಮೂಲಕ ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿ 14 ವಿಕೆಟ್ ಪಡೆದರು. ಇದು ದ್ವಿಪಕ್ಷೀಯ ಟಿ20ಐ ಸರಣಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್ ಎಂಬ ಸಾರ್ವಕಾಲಿಕ ದಾಖಲೆಯಾಗಿದೆ. ದ್ವಿಪಕ್ಷೀಯ ಟಿ20 ಸರಣಿಯಲ್ಲಿ ಬೇರೆ ಯಾವುದೇ ಭಾರತೀಯ ಬೌಲರ್ ಇಷ್ಟು ವಿಕೆಟ್ ಪಡೆದಿಲ್ಲ.
ಈ ಹಿಂದೆ ಇದೇ ದಾಖಲೆ ವರುಣ್ ಚಕ್ರವರ್ತಿ ಹೆಸರಿನಲ್ಲೇ. ದಕ್ಷಿಣ ಆಫ್ರಿಕಾ(South Africa) ವಿರುದ್ಧದ 4 ಪಂದ್ಯಗಳಲ್ಲಿ ಅವರು 12 ವಿಕೆಟ್ ಪಡೆದಿದ್ದರು. ಆಗಲೂ ಅವರು ದಾಖಲೆ ಬರೆದಿದ್ದರು.
ಸರಣಿಯೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದವರ ಪೈಕಿ ವರುಣ್ ಮೊದಲ ಎರಡು ಸ್ಥಾನ ಪಡೆದಿದ್ದರೆ, 3 ಮತ್ತು 4ನೇ ಸ್ಥಾನದಲ್ಲಿ ಆರ್ ಅಶ್ವಿನ್ (11, 9 ವಿಕೆಟ್) ಇದ್ದಾರೆ. ರವಿ ಬಿಷ್ಣೋಯ್ (9) ಐದನೇ ಸ್ಥಾನದಲ್ಲಿದ್ದಾರೆ.
ಎಷ್ಟು ವಿಕೆಟ್‌ಗಳು?
ಮೊದಲ ಟಿ20ಐ ಪಂದ್ಯದಲ್ಲಿ 23 ರನ್ಗಳಿಗೆ 3 ವಿಕೆಟ್, ಎರಡನೇ ಟಿ20ಐ ಪಂದ್ಯದಲ್ಲಿ 38 ರನ್ಗೆ 2 ವಿಕೆಟ್, ಮೂರನೇ ಟಿ20 ಪಂದ್ಯದಲ್ಲಿ 24 ರನ್ಗೆ 5 ವಿಕೆಟ್, 4ನೇ ಟಿ20ಐನಲ್ಲಿ ವರುಣ್ 28 ರನ್ಗೆ 2 ವಿಕೆಟ್ ಪಡೆದರು. ಇದೀಗ ಕೊನೆಯ ಪಂದ್ಯದಲ್ಲೂ 2 ವಿಕೆಟ್ ಕಿತ್ತರು.
ದಕ್ಷಿಣ ಆಫ್ರಿಕಾ ಸರಣಿಯಲ್ಲಿ 12 ವಿಕೆಟ್ ಪಡೆದಿದ್ದರೂ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಸಿಕ್ಕಿರಲಿಲ್ಲ.