ನವದೆಹಲಿ: ಚಾಂಪಿಯನ್ಸ್ ಟ್ರೋಪಿಯ ತನ್ನ ಕೊನೆಯ ಗ್ರೂಪ್ ಹಂತದ ಪಂದ್ಯದಲ್ಲಿ ಭಾರತ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿ ಐಸಿಸಿ ಪುರುಷರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಆಡಲು ಸಜ್ಜಾಗಿದೆ. ಈ ಬಗ್ಗೆ ಮಾತನಾಡಿದ ಭಾರತದ ಮಾಜಿ ಕ್ರಿಕೆಟಿಗ ಅಂಬಾಟಿ ರಾಯುಡು, ಮುಂದಿನ ಪಂದ್ಯದಲ್ಲಿ ಭಾರತ ತಂಡದ ಮ್ಯಾನೇಜ್ಮೆಂಟ್ಗೆ ಎದುರಾಗಲಿರುವ ಆಯ್ಕೆ ಗೊಂದಲದ ಬಗ್ಗೆಮಾತನಾಡಿದ್ದಾರೆ. ವರುಣ್ ಚಕ್ರವರ್ತಿ (Varun Chakaravarthy) ನ್ಯೂಜಿಲೆಂಡ್ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡಿದ ತಮ್ಮ ಮೊದಲ ಒಡಿಐ ಪಂದ್ಯದಲ್ಲಿ ಐದು ವಿಕೆಟ್ ಸಾಧನೆ ಮಾಡಿದ್ದಾರೆ.
ಬಾಂಗ್ಲಾದೇಶ ಮತ್ತು ಪಾಕಿಸ್ತಾನ ವಿರುದ್ಧದ ಇಲೆವೆನ್ ನ ಭಾಗವಾಗದ ನಂತರ ಹರ್ಷಿತ್ ರಾಣಾ ಬದಲಿಗೆ ಅವರು ಪ್ಲೇಯಿಂಗ್ ಇಲೆವೆನ್ ನಲ್ಲಿ ಚಕ್ರವರ್ತಿ ಸ್ಥಾನ ಪಡೆದಿದ್ದರು. ಭಾರತದ ಸ್ಪಿನ್ ಬೌಲರ್ಗಳನ್ನು ಹೊಗಳಿದ ಮಾಜಿ ಆಟಗಾರ ರಾಯುಡು, 42 ರನ್ ನೀಡಿ 5 ವಿಕೆಟ್ ಪಡೆದ ಚಕ್ರವರ್ತಿ ಅವರನ್ನು ವಿಶೇಷವಾಗಿ ಶ್ಲಾಘಿಸಿದರು.
Varun Chakravarthy's performance since his international comeback in October 2024 (ODIs & T20Is):
— House_of_Cricket (@Houseof_Cricket) March 2, 2025
Match: 14
Wickets: 37
Avg: 12.02
5 wicket haul: 3#ChampionsTrophy #INDvsNZ || #varunchakravarthypic.twitter.com/X3LENnat6z
ವರುಣ್ ಅದ್ಭುತವಾಗಿ ಆಡಿದರು. ಅವರ ವೃತ್ತಿಜೀವನದ ಆರಂಭದಲ್ಲಿ ತಮ್ಮ ಬೌಲಿಂಗ್ನಲ್ಲಿ ಲೆಂತ್ ಕಂಡುಕೊಂಡಿರಲಿಲ್ಲ. ಆದರೆ ಈಗ, ಅವರ ಬೌಲಿಂಗ್ ಎದುರಿಸಲು ತುಂಬಾ ಕಷ್ಟಕರವಾಗಿರುತ್ತದೆ. . ಅವರ ಶೈಲಿಯು ಸ್ವಾಭಾವಿಕವಾಗಿ ಅವರು ಎಡಗೈ ಸ್ಪಿನ್ ಎಂಬಂತೆ ತೋರುತ್ತದೆ. ಆದರೆ ಅವರ 90% ಎಸೆತಗಳು ಗೂಗ್ಲಿಗಳಾಗಿರುತ್ತದೆ. ಇದು ಅವರನ್ನು ಈ ಹಿಂದೆ ಎದುರಿಸದ ಬ್ಯಾಟರ್ಗಳಿಗೆ ಕಠಿಣವಾಗಿರುತ್ತದೆ. ಅನೇಕ ನ್ಯೂಜಿಲೆಂಡ್ ಬ್ಯಾಟರ್ಗಳು ಅವರ ವಿರುದ್ಧ ಹೆಚ್ಚು ಆಡಿಲ್ಲ.ಅಂತೆಯೇ ಚಕ್ರವರ್ತಿ ಭಾರತಕ್ಕೆ ಇನ್ನಷ್ಟು ಸೇವೆಗಳನ್ನು ನೀಡಬೇಕಾಗಿದೆ ಎಂದು ಹೇಳಿದರು.
“ಅವರ ಪ್ರಭಾವಶಾಲಿ ಪ್ರದರ್ಶನವು ಸೆಮಿಫೈನಲ್ಗೆ ತಂಡದ ಆಯ್ಕೆಯ ಸಂದಿಗ್ಧತೆ ಸೃಷ್ಟಿಸಿದೆ. ತಂಡದಲ್ಲಿ ಆಯ್ಕೆ ಮಾಡಲು ಅನೇಕ ದೊಡ್ಡ ಆಟಗಾರರಿದ್ದಾರೆ. ಆದರೆ ವರುಣ್ ಚಕ್ರವರ್ತಿ ಅದ್ಭುತ ಫಾರ್ಮ್ನಲ್ಲಿದ್ದಾರೆ. ಭಾರತದಲ್ಲಿ ಸ್ಪಿನ್ನರ್ಗಳ ಪ್ರಭಾವ ಹೆಚ್ಚಿದೆ. ಜಡೇಜಾ ಅದ್ಭುತ ಆಟವಾಡಿದ್ದಾರೆ. ಎಲ್ಲಾ ನಾಲ್ಕು ಸ್ಪಿನ್ನರ್ಗಳು ಅಸಾಧಾರಣವಾಗಿ ಬೌಲಿಂಗ್ ಮಾಡಿದ್ದಾರೆ. ಪಿಚ್ ಖಂಡಿತವಾಗಿಯೂ ಅವರಿಗೆ ಸಹಾಯ ಮಾಡಿದೆ. ನ್ಯೂಜಿಲೆಂಡ್ನ ಬ್ಯಾಟರ್ಗಳು ಸ್ಪಿನ್ ಬೌಲಿಂಗ್ಗೆ ಹೆದರಿದರು ಎಂದು ಹೇಳಿದ್ದಾರೆ.
ಶ್ರೇಯಸ್ಗೆ ಶ್ಲಾಘನೆ
ಶ್ರೇಯಸ್ ಅಯ್ಯರ್ ಪ್ರದರ್ಶನದ ಬಗ್ಗೆಯೂ ಮಾತನಾಡಿದ ರಾಯುಡು, 98 ಎಸೆತಗಳಲ್ಲಿ 79 ರನ್ ಗಳಿಸಿ ನಾಲ್ಕನೇ ಕ್ರಮಾಂಕದಲ್ಲಿ ತಮ್ಮ ಮೌಲ್ಯ ಸಾಬೀತುಪಡಿಸಿದ್ದಾರೆ ಎಂದು ಹೇಳಿದರು. ಪವರ್ಪ್ಲೇನಲ್ಲಿ ಮೂರು ತ್ವರಿತ ವಿಕೆಟ್ಗಳನ್ನು ಕಳೆದುಕೊಂಡ ಭಾರತಕ್ಕೆ ಅಯ್ಯರ್ ಮತ್ತು ಅಕ್ಷರ್ ಪಟೇಲ್ ಅವರ 98 ರನ್ಗಳ ಜೊತೆಯಾಟ ನೆರವಾಗಿತ್ತು.
ಇದನ್ನೂ ಓದಿ: T20I Rankings: ಜೀವನ ಶ್ರೇಷ್ಠ ರ್ಯಾಂಕ್ ಪಡೆದು ಮಿಂಚಿದ ತಿಲಕ್ ವರ್ಮಾ, ವರುಣ್ ಚಕ್ರವರ್ತಿ
“ನಾಲ್ಕನೇ ಕ್ರಮಾಂಕದ ಬ್ಯಾಟರ್ನ ಪ್ರಾಮುಖ್ಯತೆ ಇಲ್ಲಿ ಸ್ಪಷ್ಟವಾಗಿದೆ. ಅಗ್ರ ಕ್ರಮಾಂಕ ವಿಫಲವಾದಾಗ, ವಿಶೇಷವಾಗಿ ಬ್ಯಾಟಿಂಗ್ ಮಾಡಲು ಸುಲಭವಲ್ಲದ ಸವಾಲಿನ ಮೇಲ್ಮೈಗಳಲ್ಲಿ ಅಂತಹ ನಿರ್ಣಾಯಕ ಇನ್ನಿಂಗ್ಸ್ ಆಡಲು ಉತ್ತಮ ಬ್ಯಾಟರ್ ಬೇಕು. ಏಕದಿನ ಪಂದ್ಯದಲ್ಲಿ 4 ಮತ್ತು 5ನೇ ಕ್ರಮಾಂಕಗಳು ನಿರ್ಣಾಯಕವಾಗುತ್ತವೆ. ಶ್ರೇಯಸ್ ಅದ್ಭುತ ಇನ್ನಿಂಗ್ಸ್ ಆಡಿದ್ದಾರೆ. ಅಕ್ಷರ್ ಪಟೇಲ್ ಅವರೊಂದಿಗಿನ ಅವರ ಪಾಲುದಾರಿಕೆ ನಿರ್ಣಾಯಕ”ಎಂದು ರಾಯುಡು ಹೇಳಿದ್ದಾರೆ.
“ಈ ಪಿಚ್ನಲ್ಲಿ ಶ್ರೇಯಸ್ ಬ್ಯಾಟಿಂಗ್ ಮಾಡಿದ ರೀತಿ ಗಮನಾರ್ಹವಾಗಿತ್ತು. ಅವರು ಔಟ್ ಆಗುವವರೆಗೂ ಚೆಂಡುಗಳನ್ನು ಸಮರ್ಥವಾಗಿ ನಿರ್ವಹಿಸಿದರು. ತಮ್ಮ ಅನುಕೂಲಕ್ಕೆ ತಕ್ಕಂತೆ ಬಳಸಿಕೊಂಡು ಸುಂದರವಾಗಿ ಆಡಿದರು. ಅವರು ಭಾರತದ ಬ್ಯಾಟರ್ಗಳಲ್ಲಿ ಇತರರಿಗಿಂತ ಚೆಂಡಿನ ವೇಗವನ್ನು ಬೇಗ ಅರಿತುಕೊಂಡಿದ್ದರು. ಇದು ನಂಬಲಾಗದ ಇನ್ನಿಂಗ್ಸ್, ಮತ್ತು ಅವರು 4 ನೇ ಕ್ರಮಾಂಕದಲ್ಲಿ ಚಾಂಪಿಯನ್ ಆಟ,” ಎಂದು ಹೇಳಿದರು.
ವಿರಾಟ್ ಕೊಹ್ಲಿ ಸಾಧನೆಗೆ ಹೊಗಳಿಕೆ
ಕೊಹ್ಲಿ ಏಕಾಗ್ರತೆಯಲ್ಲಿ ಆಡಿದ್ದು ಮತ್ತು ದೊಡ್ಡ ಸ್ಕೋರ್ ಮಾಡಲು ಮುಂದಾಗಿದ್ದುಗೊತ್ತಾಗಿತ್ತು. ವಿರಾಟ್ ಕೊಹ್ಲಿ ಸಾಮಾನ್ಯವಾಗಿ ಸವಾಲನ್ನು ಎದುರಿಸುತ್ತಾರೆ. ದುರದೃಷ್ಟವಶಾತ್, , ಗ್ಲೆನ್ ಫಿಲಿಪ್ಸ್ ಅದ್ಭುತ ಕ್ಯಾಚ್ ಪಡೆದು ಅವರನ್ನು ಔಟ್ ಮಾಡಿದರು. ಅದೃಷ್ಟವು ಅವರ ಪರವಾಗಿರಲಿಲ್ಲ. ಅವರು ರನ್ ಹಸಿವನ್ನು ಸೆಮಿಫೈನಲ್ನಲ್ಲಿ ದೊಡ್ಡ ಇನ್ನಿಂಗ್ಸ್ ಆಗಿ ಪರಿವರ್ತಿಸುತ್ತಾರೆ ಎಂದು ಆಶಿಸುತ್ತೇವೆ. ನಾವೆಲ್ಲರೂ ಅವರು ಅತ್ಯುತ್ತಮವಾಗಿ ಆಡುವುದನ್ನು ನೋಡುತ್ತೇವೆ,” ಎಂದು ಹೇಳಿದರು.
“ಸೆಮಿಫೈನಲ್ ಪಂದ್ಯ ಆಡಮ್ ಜಂಪಾ ಮತ್ತು ವಿರಾಟ್ ಕೊಹ್ಲಿ ನಡುವೆ ನಡೆಯಲಿದೆ. ವಿರಾಟ್ ಇತ್ತೀಚೆಗೆ ಲೆಗ್ ಸ್ಪಿನ್ನರ್ಗಳ ವಿರುದ್ಧ ಹೆಣಗಾಡಿದ್ದಾರೆ. ಆದರೆ ಈ ಪಂದ್ಯಾವಳಿಯಲ್ಲಿ ಅವರು ತೋರಿಸಿದ ಫಾರ್ಮ್ ಆಸ್ಟ್ರೇಲಿಯಾ ವಿರುದ್ಧ ಉತ್ತಮವಾಗಿ ಅಡಬಲ್ಲರು ” ಎಂದು ರಾಯುಡು ಹೇಳಿದ್ದಾರೆ.