ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ವರಮಹಾಲಕ್ಷ್ಮೀ ವೃತಾಚರಣೆ ಹಬ್ಬದ ಸಂಭ್ರಮ ಮನೆ ಮಾಡಿದೆ.
ಶ್ರಾವಣದ ಮೊದಲ ಹಬ್ಬ ವರಮಹಾಲಕ್ಷ್ಮೀ ವೃತಾಚರಣೆಯನ್ನು ಸಿಟಿ ಮಂದಿ ಭರ್ಜರಿಯಾಗಿ ಆಚರಿಸುತ್ತಿದ್ದಾರೆ.
ಬೆಲೆ ಏರಿಕೆ ನಡುವೆಯೂ ನಿನ್ನೆ ಭರ್ಜರಿಯಾಗಿ ಖರೀದಿ ನಡೆಸಿದ ಜನರು, ಇಂದು ವಿಜೃಂಭಣೆಯಿಂದ ವರಮಹಾಲಕ್ಷ್ಮಿ ವೃತಾಚರಣೆ ಮಾಡುತ್ತಿದ್ದಾರೆ. ನಗರದ ಪ್ರಸಿದ್ಧ ದೇವಾಲಯಗಳಲ್ಲೂ ವರಮಹಾಲಕ್ಷ್ಮಿ ಪ್ರಯುಕ್ತ ವಿಶೇಷ ಪೂಜೆ ಸಲ್ಲಿಸಲಾಗಿದೆ.
ಮನೆಮನೆಯಲ್ಲಿ ಮಹಾಲಕ್ಷ್ಮೀ ಪೂಜೆ ಮಾಡಿ ದೇವಸ್ಥಾನದತ್ತ ಜನರು ಆಗಮಿಸಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.