ಅಮೆರಿಕದ ಜನಪ್ರಿಯ ಪೋರ್ನ್ ತಾರೆ ವಿಟ್ನಿ ರೈಟ್ ಇತ್ತೀಚೆಗೆ ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನಕ್ಕೆ ಭೇಟಿ ನೀಡಿದ್ದಾರೆ. ಇದು ದೊಡ್ಡ ಮಟ್ಟಿನ ಸಂಚಲನ ಮೂಡಿಸಿದೆ. ಇವರ ಪ್ರವಾಸವನ್ನು ತಾಲಿಬಾನ್ ಆಡಳಿತ ಅಧಿಕೃತವಾಗಿ ಹೇಳಿಕೊಂಡಿಲ್ಲ. ಹಲವು ಬಾರಿ ಮುಸ್ಲಿಂ ರಾಷ್ಟ್ರಗಳಿಗೆ ಪ್ರವಾಸ ಕೈಗೊಂಡು ಸದ್ದು ಮಾಡಿದ್ದ ವಿಟ್ನಿ, ಈ ಬಾರಿ ಮಹಿಳಾ ಹಕ್ಕುಗಳನ್ನು ಸಂಪೂರ್ಣವಾಗಿ ನಿರಾಕರಿಸಿರುವ ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡಿರುವುದು ಅಚ್ಚರಿ ಮೂಡಿಸಿದೆ.
ವಿಟ್ನಿ ರೈಟ್, ಇನ್‌ಸ್ಟಾಗ್ರಾಮ್‌ನಲ್ಲಿ ತಮ್ಮ ಅಫ್ಘಾನಿಸ್ತಾನ ಪ್ರವಾಸದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, ಅಲ್ಲಿ ಅಫ್ಘಾನಿಸ್ತಾನದ ರಾಷ್ಟ್ರೀಯ ವಿಮಾನಯಾನ ಸಂಸ್ಥೆ ‘ಅರಿಯಾನಾ’ ದ ಮುಂದೆ ನಿಂತುಕೊಂಡಿದ್ದಾರೆ, ಪಶ್ಚಿಮ ಅಫ್ಘಾನಿಸ್ತಾನದ ಹೆರಾತ್ ನಗರದ ಚಿತ್ರಗಳನ್ನು ಪ್ರಕಟಿಸಿದ್ದಾರೆ. ಅವರು ತಮ್ಮ ಫೋಟೋಗಳನ್ನು ಅವರು ಹಂಚಿಕೊಂಡಿಲ್ಲ ಮತ್ತು ಈ ವಿಷಯದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ಅಸೋಸಿಯೇಟೆಡ್ ಪ್ರೆಸ್ (AP) ವರದಿ ಮಾಡಿದೆ.

ಪೋರ್ನ್ ತಾರೆಯ ಪ್ರವಾಸ ತಾಲಿಬಾನ್ ಆಡಳಿತಕ್ಕೆ ಮತ್ತು ಇಸ್ಲಾಮಿಕ್ ನಿಯಮಗಳಿಗೆ ವಿರುದ್ಧವಾಗಿರುವುದರಿಂದ, ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಅಮೆರಿಕ ಮೂಲದ ವ್ಯಕ್ತಿಯು ತಾಲಿಬಾನ್ ಆಳ್ವಿಕೆಯ ಅಫ್ಘಾನಿಸ್ತಾನಕ್ಕೆ ಪ್ರವೇಶಿಸುವುದು ಸುಲಭವಲ್ಲ, ಏಕೆಂದರೆ ಅಮೆರಿಕದಲ್ಲಿ ಅಫ್ಘಾನ್ ರಾಯಭಾರ ಕಚೇರಿಗಳು ಇಲ್ಲ. ಹೀಗಾಗಿ ವೀಸಾ ಪಡೆಯಲು ಸಾಧ್ಯವಿಲ್ಲ.
ನಾಗರಿಕ ಅಶಾಂತಿ, ಭಯೋತ್ಪಾದನೆ, ಅಪಹರಣ ಮತ್ತು ಆರೋಗ್ಯ ಸೇವೆಗಳ ಕೊರತೆಯಿಂದ ಅಫ್ಘಾನಿಸ್ತಾನಕ್ಕೆ ಪ್ರವಾಸ ಮಾಡುವುದನ್ನು ಅಮೆರಿಕ ಸರ್ಕಾರವು ನಿಷೇಧಿಸಿದೆ. ಆದರೆ ರೈಟ್ ಹೇಗೆ ಅಫ್ಘಾನಿಸ್ತಾನಕ್ಕೆ ಪ್ರವೇಶ ಪಡೆದರು ಎಂಬ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ವಿಟ್ನಿ ರೈಟ್, ಇಸ್ರೇಲ್ ಸರ್ಕಾರದ ವಿರುದ್ಧ ಪ್ರಬಲ ಟೀಕಾಕಾರರಾಗಿದ್ದು, ಪ್ಯಾಲೆಸ್ತೀನ್ ಹಕ್ಕುಗಳ ಪರ ಬೆಂಬಲ ನೀಡುತ್ತಾರೆ. ಈ ಹಿಂದೆಯೂ ಅವರು 2023ರಲ್ಲಿ ಇರಾನ್‌ಗೆ ಭೇಟಿ ನೀಡಿ ವಿವಾದಕ್ಕೆ ಕಾರಣವಾಗಿದ್ದರು. ಇಸ್ಲಾಮಿಕ್ ಕ್ರಾಂತಿಯ ನಂತರ ಅಮೆರಿಕ ಪ್ರಭಾವವನ್ನು ತಳ್ಳಿ ಹಾಕಿರುವ ಇರಾನ್, ಅಶ್ಲೀಲ ಚಿತ್ರ ನಟಿಗೆ ಪ್ರವಾಸ ಅನುಮತಿ ನೀಡಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿತ್ತು.
ಇರಾನ್ ಸರ್ಕಾರ ಅವರ ಪ್ರವಾಸದ ಬಗ್ಗೆ ಸ್ಪಷ್ಟನೆ ನೀಡಿತ್ತು. ಅವರು ಸಾಮಾನ್ಯ ಪ್ರವಾಸಿಗನಂತೆ ವೀಸಾ ಪಡೆದಿದ್ದಾರೆ ಎಂದು ಹೇಳಿತ್ತು. ಆದರೆ, ಇಸ್ಲಾಮಿಕ್ ರಾಷ್ಟ್ರದಲ್ಲಿ ಇವರ ಪ್ರವಾಸ ಅನೇಕರನ್ನು ಆಶ್ಚರ್ಯಕ್ಕೆ ಗುರಿ ಮಾಡಿತ್ತು. ಈಗ, ಅವರ ಅಫ್ಘಾನಿಸ್ತಾನ ಪ್ರವಾಸದ ಹಿನ್ನೆಲೆಯಲ್ಲೂ ಇದೇ ರೀತಿಯ ಪ್ರಶ್ನೆಗಳು ಎದುರಾಗಿವೆ.
ಪೋರ್ನ್ ನಟಿಯ ಭೇಟಿ ಬಗ್ಗೆ ತಾಲಿಬಾನ್ ಆಡಳಿತ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ, ಆದರೆ ಅವರ ಪ್ರವಾಸ ಮುಸ್ಲಿಂ ದೇಶಗಳಲ್ಲಿ ನೀತಿ ಮತ್ತು ಧಾರ್ಮಿಕ ಸಿದ್ಧಾಂತಗಳ ವಿರುದ್ಧ ಚರ್ಚೆಗೆ ಗ್ರಾಸವಾಗುತ್ತಿದೆ.