ಡಿಜಿಟಲ್ ಪೇಮೆಂಟ್ ಪಾಲಿಗೆ ಇವತ್ತು ಕರಾಳ ಶನಿವಾರ. ಇಂದು ಮುಂಜಾನೆಯಿಂದಲೇ ಯುಪಿಐ ಪೇಮೆಂಟ್ ಸರ್ವರ್ ಸಂಪೂರ್ಣ ಡೌನ್ ಆಗಿತ್ತು.
ಪರಿಣಾಮ ಗೂಗಲ್ ಪೇ, ಫೋನ್ ಪೇ ಹಾಗೂ ಪೇಟಿಯಂ ಹಣ ಪಾವತಿ ಮಾಡಲಾಗದೆ ಗ್ರಾಹಕರು ಪರದಾಡಿದ್ದಾರೆ. ಯುಪಿಐ ಸರ್ವರ್ ಡೌನ್ ಆಗಿದ್ದಕ್ಕೆ, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇನ್ನು UPI ಕಾರ್ಯಾಚರಣೆಗಳನ್ನು ನೋಡಿಕೊಳ್ಳುವ ರಾಷ್ಟ್ರೀಯ ಪಾವತಿ ನಿಗಮ ಈ ಸಮಸ್ಯೆ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಬಳಕೆದಾರರು ಹಣವನ್ನು ವರ್ಗಾಯಿಸಲು ಅಥವಾ ಅವರ ಖಾತೆಯ ಬ್ಯಾಲೆನ್ಸ್ ಪರಿಶೀಲಿಸಲು ಸಾಧ್ಯವಾಗುತ್ತಿಲ್ಲ ಎಂದು ದೂರುತ್ತಿದ್ದಾರೆ.
ಎರಡು ವಾರಗಳ ಹಿಂದೆ ಸಹ UPI ಸೇವೆಗಳು ಸ್ಥಗಿತಗೊಂಡಿದ್ದವು. ಇದಕ್ಕೂ ಮೊದಲು, NPCI ಎಕ್ಸ್ ನಲ್ಲಿ ಸಮಸ್ಯೆಯನ್ನು ಒಪ್ಪಿಕೊಂಡಿತ್ತು ಮತ್ತು ಅದನ್ನು ಗಂಟೆಗಳಲ್ಲಿ ಸರಿಪಡಿಸಿತ್ತು.