ಬೆಂಗಳೂರು : ಬೆಂಗಳೂರಿನಲ್ಲಿ ರೋಡ್ ರೇಜ್ ಪ್ರಕರಣಗಳು ನಿಲ್ಲುವ ಸೂಚನೆಗಳು ಕಾಣುತ್ತಿಲ್ಲ. ಇದೀಗ ಮತ್ತೊಂದು ರೋಡ್ ರೇಜ್ ಪ್ರಕರಣ ಬೆಳಕಿಗೆ ಬಂದಿದೆ. ಮಂಗಳವಾರ ಬೆಳಗ್ಗೆ 11.30ರ ಸುಮಾರಿಗೆ ಬಿಎಂಟಿಸಿ ಬಸ್‌ನ ಚಾಲಕ ನಾಗೇಶ್ ಹಾಗೂ ಕಂಡಕ್ಟರ್ ಕೆಂಚಪ್ಪ ಅವರ ಮೇಲೆ ಕ್ಯಾಬ್ ಚಾಲಕ ನರಸಿಂಹಯ್ಯ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ ಘಟನೆ ಸಂಪಿಗೆಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಹೆಗ್ಡೆ ನಗರದಲ್ಲಿ ನಡೆದಿದೆ.
ಶಿವಾಜಿನಗರದಿಂದ ಯಲಹಂಕ ಕಡೆಗೆ ತೆರಳುತ್ತಿದ್ದ ಬಸ್‌ಗೆ ಕ್ಯಾಬ್ ಚಾಲಕನ ವಾಹನ “ಟಚ್ ಆಯ್ತು” ಎಂಬ ಕಾರಣಕ್ಕೆ ಸುಮಾರು 1 ಕಿಲೋಮೀಟರ್ ಚೇಸ್ ಮಾಡಿ, ಬಸ್ ನಿಲ್ಲಿಸಿ ಗಲಾಟೆ ಮಾಡಿದ್ದಾರೆ. ಬಸ್ ಚಾಲಕ ವಿವಾದಕ್ಕೆ ಒಳಗಾಗದೇ “ಹೋಗಿ” ಎಂದು ಹೇಳಿದರೂ, ಆರೋಪಿಯು ಹಲ್ಲೆಗೆ ಮುಂದಾಗಿದ್ದಾನೆ.
ಘಟನೆಯ ಸಂಪೂರ್ಣ ದೃಶ್ಯವನ್ನು ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದು, ನಂತರ ಚಾಲಕ ಹಾಗೂ ಕಂಡಕ್ಟರ್ ಕೂಡಲೇ ಬಸ್ ಅನ್ನು ಸಂಪಿಗೆಹಳ್ಳಿ ಪೊಲೀಸ್ ಠಾಣೆಗೆ ತಿರುಗಿಸಿ ದೂರು ದಾಖಲಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಪಿಗೆಹಳ್ಳಿ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ : ಗೋವಾ ಅಗ್ನಿ ದುರಂತ | ನೈಟ್‌ಕ್ಲಬ್‌ನ ಸಹ-ಮಾಲೀಕ ಅರೆಸ್ಟ್!



















