ಬೆಂಗಳೂರು : ಏರಿಯಾದಲ್ಲಿ ಬಿಲ್ಡಪ್ ಕೊಡುವ ಕ್ಷುಲ್ಲಕ ಕಾರಣಕ್ಕೆ ಪುಂಡರು ಯುವಕನಿಗೆ ಚಾಕು ಹಾಕಿರುವ ಘಟನೆ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ನಡೆದಿದೆ.
ಹರ್ಷಿತ್ ಯಾದವ್ ಚಾಕು ಇರಿತಕ್ಕೆ ಒಳಗಾದ ಯುವಕ. ಕಿರಣ್ ಮತ್ತು ಭರತ್ ಎಂಬುವರಿಂದ ಕೃತ್ಯ ಆರೋಪ. ಏರಿಯಾದಲ್ಲಿ ಬಿಲ್ಡಪ್ ಕೊಡಲು ಪುಡಾರಿಗಳು ಚಾಕು ಹಾಕಿದ್ದಾರೆ. ಕೈಗೆ ಗಾಯವಾಗುತ್ತಿದ್ದಂತೆ ತಪ್ಪಿಸಿಕೊಂಡು ಹರ್ಷಿತ್ ಓಡಿದ್ದಾನೆ.
ಎರಡು ತಿಂಗಳಿನಿಂದ ಏರಿಯಾದಲ್ಲಿ ಕೋಲ್ಡ್ ವಾರ್ ಶುರುವಾಗಿತ್ತು. ಏರಿಯಾ ಹುಡುಗರ ಜೊತೆ ಚಿಕ್ಕ ಪುಟ್ಟ ವಿಚಾರಕ್ಕೆ ಪುಂಡರು ಗಲಾಟೆ ಮಾಡುತ್ತಿದ್ದು, ಪದೇ ಪದೇ ಅಡ್ಡ ಹಾಕಿ ಬೆದರಿಕೆ ಹಾಕುತ್ತಿದ್ದರು. ಇದೀಗ ಹರ್ಷಿತ್ ಕೈಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಈ ಪ್ರಕರಣ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಇದನ್ನೂ ಓದಿ : ಜನವರಿ 1ರಿಂದ ಕ್ರೆಡಿಟ್ ಸ್ಕೋರ್, ಹೋಮ್ ಲೋನ್ ಇಎಂಐ ಸೇರಿ ಯಾವೆಲ್ಲ ಹಣಕಾಸು ನಿಯಮ ಬದಲು? ಇಲ್ಲಿದೆ ಮಾಹಿತಿ


















