ಕನ್ನಡದ ಜನಪ್ರಿಯ ಪೋಷಕ ನಟ, ಮಾಜಿ ಬಿಗ್ಬಾಸ್ ಕನ್ನಡ ಸ್ಪರ್ಧಿ ಆಗಿರುವ ಉಗ್ರಂ ಮಂಜು ಇಂದು ಧರ್ಮಸ್ಥಳ ಶ್ರೀ ಮಂಜುನಾಥನ ಸನ್ನಿಧಿಯಲ್ಲಿ ಗುರು, ಹಿರಿಯ ಆಶೀರ್ವಾದದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಧರ್ಮಸ್ಥಳದ ಮಹೋತ್ಸವ ಭವನದಲ್ಲಿ ನಡೆದ ಮದುವೆ ಕಾರ್ಯಕ್ರಮದಲ್ಲಿ ಕುಟುಂಬಸ್ಥರು, ಆಪ್ತರು ಭಾಗಿಯಾಗಿದ್ದರು.

ನಿನ್ನೆ ಗ ಉಗ್ರಂ ಮಂಜು ಅವರ ಅರಿಶಿಣ ಶಾಸ್ತ್ರ ಸರಳವಾಗಿ ನೆರವೇರಿತ್ತು. ಮನೆಯಲ್ಲಿಯೇ ನಡೆದ ಈ ಕಾರ್ಯಕ್ರಮದಲ್ಲಿ ಕುಟುಂಬ ಸದಸ್ಯರು, ಆಪ್ತರು ಹಾಗೂ ಆತ್ಮೀಯ ಗೆಳೆಯರು ಮಾತ್ರ ಭಾಗವಹಿಸಿದ್ದರು. ಹಳದಿ ಶಾಸ್ತ್ರದ ಫೋಟೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು.

ಮಂಜು ‘ಉಗ್ರಂ’ ಸಿನಿಮಾದಿಂದ ಖ್ಯಾತಿ ಪಡೆದಿದ್ದು ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದಾರೆ. ಕಿರಿಕ್ ಪಾರ್ಟಿ, ಹೀರೋ, ಕಿಡಿ, ಕಿರೀಟ, ರಾನಿ, ದೂರದರ್ಶನ ಸಿನಿಮಾಗಳಲ್ಲಿ ನಟಿಸಿದ್ದರು. ಅಷ್ಟೇ ಅಲ್ಲದೆ ಮ್ಯಾಕ್ಸ್ ಸಿನಿಮಾದಲ್ಲಿ ಉಗ್ರಂ ಮಂಜು ಸೂಪರ್ ಆಗಿ ಆ್ಯಕ್ಟ್ ಮಾಡಿದ್ದರು. ಸುದೀಪ್ ಜೊತೆಗೆಯೇ ಖಡಕ್ ಆಗಿಯೇ ಡೈಲಾಗ್ ಹೊಡೆದು ಮಿಂಚಿದ್ದರು. ಬೆಂಗಳೂರಿನಲ್ಲಿ ಅದ್ದೂರಿಯಾಗಿ ರಿಸೆಪ್ಶನ್ ನಡೆಯಲಿದೆ. ಮದುವೆಯ ಶುಭಾರಂಭಕ್ಕೆ ಸಂಕೇತವಾದ ಅರಿಶಿಣ ಶಾಸ್ತ್ರದಲ್ಲಿ ಸಂಪ್ರದಾಯಿಕ ವೇಸ್ಟಿ ಧರಿಸಿ ಸಿಂಪಲ್ ಉಡುಗೆಯಲ್ಲಿ ಕಾಣಿಸಿಕೊಂಡಿದ್ದರು.
ಇದನ್ನೂ ಓದಿ: ಹಳ್ಳಿ ಸೊಗಡಿನ “ವಲವಾರ” ಮೆರವಣಿಗೆ..!



















