ಚಾಮರಾಜನಗರ: ಇಲ್ಲಿನ ಮಹದೇಶ್ವರ ಬೆಟ್ಟದಲ್ಲಿ ಯುಗಾದಿ ಸಂಭ್ರಮ ಕಳೆಗಟ್ಟಿದ್ದು, ವಿಜೃಂಭಣೆಯಿಂದ ಮಹದೇಶ್ವರನ ರಥೋತ್ಸವ ನಡೆಯಿತು.
ರಥೋತ್ಸವದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಭಾಗಿಯಾಗಿದ್ದರು. ಈ ವೇಳೆ ಉಘೇಉಘೇ ಮಾದಪ್ಪ ಎಂಬ ಜಯಘೋಷ ಮುಗಿಲು ಮುಟ್ಟಿತ್ತು. ರಥಕ್ಕೆ ಹೂ, ಹಣ್ಣು, ದವಸ ಧಾನ್ಯ ಎಸೆದು ಭಕ್ತರು ಭಕ್ತಿ ಮೆರೆದರು. ಮಾದಪ್ಪನ ರಥದೊಂದಿಗೆ ರುದ್ರಾಕ್ಷಿ ಮಂಟಪ ಹುಲಿವಾಹನ, ಬಸವ ವಾಹನ ಸಾಗಿದವು. ಜನಪದ ಕಲಾ ತಂಡಗಳು ರಥೋತ್ಸವಕ್ಕೆ ಮೆರಗು ನೀಡಿದವು.