ಬೆಂಗಳೂರು : ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆ ಮಾಡಿರುವ ಹಿನ್ನೆಲೆಯಲ್ಲಿ, ರಾಜಧಾನಿ ಬೆಂಗಳೂರಿನ ಕೆಆರ್ ಮಾರ್ಕೆಟ್‌ನಲ್ಲಿ ಖರೀದಿ ಜೋರಾಗಿದೆ. ಹಬ್ಬದ ಸಡಗರದ ಮಧ್ಯೆ ಮಧ್ಯರಾತ್ರಿಯಿಂದಲೇ ಮಾರ್ಕೆಟ್‌ನಲ್ಲಿ ವ್ಯಾಪಾರ ಆರಂಭಗೊಂಡಿದೆ.
ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಬಂದ ಹೂವಿನ ಬೆಳೆಗಾರರು ನೇರವಾಗಿ ಮಾರಾಟ ನಡೆಸುತ್ತಿದ್ದು, ಸಾವಿರಾರು ಸಂಖ್ಯೆಯಲ್ಲಿ ಜನರು ಆಗಮಿಸಿ ಹೂವು, ಹಣ್ಣು, ಮಾವಿನ ಸೊಪ್ಪು ಹಾಗೂ ಬೇವಿನ ಸೊಪ್ಪು ಖರೀದಿಸಲು ಮುಗಿಬಿದ್ದಿದ್ದಾರೆ. ಯುಗಾದಿ ಹಿನ್ನೆಲೆ ಬೇಡಿಕೆ ಹೆಚ್ಚಾದ ಕಾರಣ ಹೂವು ಮತ್ತು ಹಣ್ಣಿನ ದರಗಳಲ್ಲಿ ಸ್ವಲ್ಪ ಏರಿಕೆ ಕಂಡುಬಂದಿದೆ.
ಹೂವು ದರಗಳು:
- ಮಲ್ಲಿಗೆ: ₹1,500 – ₹1,800
- ಮಲ್ಲಿಗೆ ಹೂವಿನ ಹಾರ: ₹300 – ₹500
- ಸೇವಂತಿಗೆ: ₹200 – ₹250
- ಗುಲಾಬಿ: ₹250
- ಚೆಂಡು ಹೂ: ₹40 – ₹50
- ಒಂದು ಕಟ್ಟು ಬೇವಿನ ಸೊಪ್ಪು: ₹20
- ಒಂದು ಕಟ್ಟು ಮಾವಿನ ಸೊಪ್ಪು: ₹25
ಒಟ್ಟಾರೆ, ಯುಗಾದಿ ಹಬ್ಬದ ಅಂಗವಾಗಿ ಕೆಆರ್ ಮಾರ್ಕೆಟ್‌ನಲ್ಲಿ ಜನಸಂದಣಿ ಹೆಚ್ಚಿದ್ದು, ವ್ಯಾಪಾರಿಗಳಲ್ಲಿ ಉತ್ಸಾಹ ಮನೆಮಾಡಿದೆ.
ಇದನ್ನೂ ಓದಿ : ನಾಡಿನೆಲ್ಲೆಡೆ ಯುಗಾದಿ ಸಂಭ್ರಮ.. ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ



















