ಚೆನ್ನೈ : ತಮಿಳುನಾಡು ಡಿಸಿಎಂ ಉದಯನಿಧಿ ಸ್ಟಾಲಿನ್ ಇದೀಗ ಮತ್ತೆ ವಿವಾದಾತ್ಮಕ ರೀತಿಯಲ್ಲಿ ಮಾತನಾಡಿದ್ದಾರೆ. ಉದಯನಿಧಿ ಸ್ಟಾಲಿನ್ ಅವರು ದೀಪಾವಳಿ ಶುಭಾಶಯ ಹೇಳುವಾಗ “ನಂಬಿಕೆ ಇರುವವರಿಗೆ” ಎಂದು ಬಳಕೆ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.

ಭಾನುವಾರ ದೀಪಾವಳಿ ಹಿನ್ನಲೆ ಡಿಎಂಕೆ ಪರವಾಗಿ ಚೆನ್ನೈನಲ್ಲಿ ಉಡುಗೊರೆ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಾತನಾಡಿದ ಅವರು, ಈ ಹಿಂದೆ ನಾನು ನೀಡಿದ ಹೇಳಿಕೆಗಳಿಂದ ಕೆಲವರು ನನಗೆ ಶುಭಾಶಯ ಹೇಳಬೇಕಾ?, ಹೇಳಬಾರದಾ? ಎಂದು ಯೋಚಿಸುತ್ತಿದ್ದರು, ನನಗೆ ಬರೀ ಶುಭಾಶಯ ಅಂತ ಹೇಳಿದ್ದರು. ಆದರೆ ನಾನು ದೀಪಾವಳಿ ಹಬ್ಬದಲ್ಲಿ ನಂಬಿಕೆ ಇರುವವರಿಗೆ ಮಾತ್ರ ಶುಭಾಶಯ ಕೋರುತ್ತೇನೆ ಎಂದು ಹೇಳಿದ್ದಾರೆ.
ಉದಯನಿಧಿ ಸ್ಟಾಲಿನ್ ಶುಭಾಶಯಕ್ಕೆ ಬಿಜೆಪಿ ಕಿಡಿ
ನಂಬಿಕೆ ಇರುವವರಿಗೆ ಮಾತ್ರ ದೀಪಾವಳಿ ಹಬ್ಬದ ಶುಭಾಶಯಗಳು ಎಂಬ ಉದಯನಿಧಿ ಹೇಳಿಕೆಗೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಉದಯನಿಧಿ ಮತ್ತು ಡಿಎಂಕೆ ತಾನೂ ಹಿಂದೂ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ ಎಂದು ವಾಗ್ದಾಳಿ ನಡೆಸಿದೆ.
ಈ ಕುರಿತು ಮಾತನಾಡಿರುವ ಹಿರಿಯ ಬಿಜೆಪಿ ನಾಯಕಿ ಮತ್ತು ಮಾಜಿ ತೆಲಂಗಾಣ ರಾಜ್ಯಪಾಲೆ, ತಮಿಳಿಸೈ ಸೌಂದರರಾಜನ್, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಮತ್ತು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಅವರಿಗೆ ದೀಪಾವಳಿ ಶುಭಾಶಯ. ಅವರು ಒಪ್ಪುತ್ತಾರೋ ಇಲ್ಲವೋ ಎಂಬುದನ್ನು ಗೊತ್ತಿಲ್ಲ ಅವರು ಮೂಲವಾಗಿ ಹಿಂದೂಗಳು. ನಂಬುವವರನ್ನು ಮಾತ್ರ ನಾವು ಬಯಸುವುದಿಲ್ಲ. ಉದಯನಿಧಿ ಅವರ ಹೇಳಿಕೆಗಳನ್ನು ನಾನು ಬಲವಾಗಿ ಖಂಡಿಸುತ್ತೇನೆ ಎಂದಿದ್ದಾರೆ.