ಬೆಂಗಳೂರಿನ ಮೈಸೂರು ರಸ್ತೆಯ ಮಾರ್ಕೆಟ್ ಫ್ಲೈ ಓವರ್ ಮೇಲೆ ತಡರಾತ್ರಿ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಯುವಕರು ಉಸಿರು ಚೆಲ್ಲಿದ್ದಾರೆ.
ಬೈಕ್ ನಲ್ಲಿ ಸಂಚರಿಸುವಾಗ ಅವಘಡ ಸಂಭವಿಸಿದ್ದು, ಯುವಕರಿಬ್ಬರು ಸ್ಥಳದಲ್ಲೇ ಅಸುನೀಗಿದ್ದಾರೆ. ಅಪಘಾತದ ರಭಸಕ್ಕೆ ಆಕಾಶ್ ಮತ್ತು ಅಪ್ಜಲ್ ಎಂಬುವವರು ಕೊನೆಯುಸಿರೆಳೆದಿದ್ದಾರೆ.
ಮೃತ ಆಕಾಶ್ ಅಗ್ರಹಾರ ನಿವಾಸಿಯಾಗಿದ್ದು, ಗ್ರೈಂಡರ್ ಆಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನಲಾಗಿದೆ. ಇನ್ನು ಅಪ್ಜಲ್ ಮಂಗಳೂರು ಮೂಲದವನಾಗಿದ್ದು, ನಗರದಲ್ಲಿ ನೆಲೆಸಿದ್ದ. ಸ್ನೇಹಿತ ಆಶಿಮ್ ಜೊತೆ ಕೆಲಸಕ್ಕೆ ಹೋಗುತ್ತಿದ್ದಾಗ ಮುಂದೆ ಹೋಗುತ್ತಿದ್ದ ಎಲೆಕ್ಟ್ರಿಕ್ ಬೈಕ್ ಗೆ ಹಿಂಬದಿಯಿಂದ ಬಂದ ಎಕ್ಸ್ ಪಲ್ಸ್ ಬೈಕ್ ಗುದ್ದಿದೆ. ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಈ ಬಗ್ಗೆ ಸಿಟಿ ಮಾರ್ಕೆಟ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ.



















