ವಾಯು ವಿಹಾರಕ್ಕೆಂದು ಹೋಗಿ ಮರಳಿ ಬಾರದ ಇಬ್ಬರು ನಿವೃತ್ತ ಉಪನ್ಯಾಸಕ
ಕೋಲಾರ: ವಾಯು ವಿಹಾರಕ್ಕೆಂದು (Promenade) ತೆರಳಿದ್ದ ನಿವೃತ್ತ ಉಪನ್ಯಾಸಕರಿಬ್ಬರಿಗೆ ಬೈಕ್ (Bike) ಡಿಕ್ಕಿ ಹೊಡೆದ ಪರಿಣಾಮ ಸಾವನ್ನಪ್ಪಿರುವ ಘಟನೆ ನಡೆದಿದೆ.
ಕೋಲಾರ (Kolar) ಜಿಲ್ಲೆಯ ಬಂಗಾರಪೇಟೆ (Bangarpet) ಪಟ್ಟಣದ ಜೂನಿಯರ್ ಕಾಲೇಜಿನ ಹತ್ತಿರ ಈ ಘಟನೆ ನಡೆದಿದೆ. ನಿವೃತ್ತ ಕನ್ನಡ ಉಪನ್ಯಾಸಕ ಕೆ.ಬಿ.ಮೋಹನ್ (64), ನಿವೃತ್ತ ರಾಸಾಯನ ಶಾಸ್ತ್ರ ಉಪನ್ಯಾಸಕ ಲಕ್ಷ್ಮೀ ನಾರಾಯಣ (62) ಸಾವನ್ನಪ್ಪಿದವರು.
ಭಾನುವಾರ ಸಂಜೆ ವೇಳೆ ವಾಯು ವಿಹಾರ ಮುಗಿಸಿ ಮರಳಿ ಮನೆಗೆ ಬರುತ್ತಿದ್ದ ಸಂದರ್ಭದಲ್ಲಿ ಬೈಕ್ ಡಿಕ್ಕಿ ಹೊಡೆದು ನಿವೃತ್ತ ಉಪನ್ಯಾಸಕರು ಗಂಭೀರ ಗಾಯಗೊಂಡಿದ್ದರು. ಗಾಯಾಳುಗಳನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಸಾವನ್ನಪ್ಪಿದ್ದಾರೆ. ಬೈಕ್ ನ್ನು ಸದ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬೈಕ್ ಸವಾರ ಪರಾರಿಯಾಗಿದ್ದಾನೆ. ಈ ಘಟನೆ ಕುರಿತು ಬಂಗಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.