ಬೆಂಗಳೂರು: ವಿಜಯನಗರ ಸಂಚಾರಿ ಪೊಲೀಸರಿಂದ ಬೈಕ್ ಸವಾರನ ಮೇಲೆ ಹಲ್ಲೆ ನಡೆದಿರುವ ಆರೋಪ ಕೇಳಿ ಬಂದಿದ್ದು, ಇಬ್ಬರು ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಲಾಗಿದೆ.
ಪಿಎಸ್ ಐ ಶಾಂತರಾಮಯ್ಯ, ಪೇದೆ ಸಾದಿಕ್ ಸಸ್ಪೆಂಡ್ ಆದ ಸಿಬ್ಬಂದಿ. ಸಂಚಾರಿ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಮಾರ್ಚ್ 14ರಂದು ಜಿಟಿ ಮಾಲ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದ ಪೊಲೀಸರು, ಆರ್ ಎಕ್ಸ್ ಬೈಕ್ ನಲ್ಲಿ ಈಶ್ವರ್ ಎಂಬಾತ ಬಂದಿದ್ದರು. ಡ್ರಂಕ್ ಆಂಡ್ ಡ್ರೈವ್ ತಪಾಸಣೆ ನಡೆಸಲಾಗಿತ್ತು. ಈ ವೇಳೆ ಮದ್ಯ ಸೇವನೆ ಮಾಡಿರುವುದು ದೃಢವಾಗಿತ್ತು. ಡ್ರಂಕ್ & ಡ್ರೈವ್ ಗೆ ಹತ್ತು ಸಾವಿರ ಫೈನ್ ಇದೆ. ಇಲ್ಲೇ ಮೂರು ಸಾವಿರ ಕೊಟ್ಟು ಬಿಡು ಬಿಡ್ತೇವಿ ಅಂತಾ ಪೊಲೀಸರು ಹೇಳಿದ್ದಾರೆ.
ಕ್ಯಾಶ್ ಇಲ್ಲ ಪೋನ್ ಪೇ ಗೂಗಲ್ ಪೇ ಮಾಡುತ್ತೇನೆ ಅಂತಾ ಈಶ್ವರ್ ಹೇಳಿದ್ದಾರೆ. ಕಡೆಗೆ ಬೈಕ್ ಸೀಜ್ ಮಾಡಿ ಕೊರ್ಟ್ ಫೈನ್ ರೆಸಿಪ್ಟ್ ಕೊಟ್ಟು ಪೊಲೀಸರು ಕಳುಹಿಸಿದ್ದಾರೆ. ಮಾರ್ಚ್ 14 ರ ಶನಿವಾರ ಕೋರ್ಟ್ ನಲ್ಲಿ ಡ್ರಂಕ್ & ಡ್ರೈವ್ ಫೈನ್ ಸೇರಿ ಒಟ್ಟು 13 ಸಾವಿರ ಫೈನ್ ನ್ನು ಈಶ್ವರ್ ಕಟ್ಟಿದ್ದಾರೆ.
ಕೋರ್ಟ್ ಫೈನ್ ಕಟ್ಟಿ ಬೈಕ್ ಬಿಡಿಸಿಕೊಳ್ಳಲು ಠಾಣೆಗೆ ಹೋದಾಗ ಅಲ್ಲಿ ಪೊಲೀಸರು ಹಲ್ಲೆ ಮಾಡಿದ್ದಾರೆ. ನಮಗೆ ಮೂರು ಸಾವಿರ ಕೊಟ್ಟಿದ್ದರೆ ಆಗಿರುವುದು. ಕೋರ್ಟ್ ನಲ್ಲಿ 13 ಸಾವಿರ ರೂ. ಕಟ್ಟಿ ಬಂದಿದ್ದೀಯಾ ಅಂತಾ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ವಿಜಯನಗರ ಸಂಚಾರಿ ಠಾಣೆ PSI ಶಾಂತರಾಮಯ್ಯ ಹಾಗೂ ಟ್ರಾಫಿಕ್ ಪೇದೆ ಸಾದಿಕ್ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಆಗ ಈಶ್ವರ್, ಪ್ರಜ್ಞಾಹೀನನಾಗಿ ಬಿದ್ದಿದ್ದಾನೆ. ಠಾಣೆಯಲ್ಲೇ ಈಶ್ವರ ಮೂರ್ಛೆ ಹೋಗಿದ್ದಾನೆ. ಆಗ ಪೊಲೀಸ್ ಸಿಬ್ಬಂದಿ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದಾರೆ. ಈ ವೇಳೆ ಕುಟುಂಬಸ್ಥರು ಸಂಶಯ ವ್ಯಕ್ತಪಡಿಸಿ, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಗ ಹಿರಿಯ ಅಧಿಕಾರಿಗಳು ಕ್ಯಾಮೆರಾ ಪರಿಶೀಲನೆ ನಡೆಸಿದಾಗ ಕರ್ತವ್ಯಲೋಪ ಎಸಗಿರುವುದು ದೃಢವಾಗಿರುವ ಹಿನ್ನೆಲೆಯಲ್ಲಿ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ.